ಅಂಕಣ

ಪೆಟ್ರೋಲ್-ಡೀಸೆಲ್ ಬೆಲೆ ಇಳಿಸಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮೋದಿಯನ್ನು ಸೋಲಿಸುವ ಮುನ್ನ ಒಮ್ಮೆ ಆ ಹಣ ಎಲ್ಲಿ ವಿನಿಯೋಗವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ

ಎಂತಹ ನಾಚಿಗೆ ಗೇಡಿನ ವಿಚಾರವಿದು ಸ್ವಲ್ಪ ಯೋಚಿಸಿ. ದೇಶದ ಅಭಿವೃದಿಗಾಗಿ ಹಗಲು ರಾತ್ರಿ ದುಡಿವ, ದೇಶದ ಸುರಕ್ಷತೆಗೆ ಎಲ್ಲಕ್ಕಿಂತ ಹೆಚ್ಚು ಪ್ರಾವಧಾನ ಕೊಡುವ, ಒಂದೇ ಒಂದು ರುಪಾಯಿ ಭ್ರಷ್ಟಾಚಾರ ಮಾಡದ ಒಬ್ಬ ಕರ್ಮಠ ಯೋಗಿಯನ್ನು ಕೇವಲ ಪೆಟ್ರೋಲ್-ಡೀಸಲ್ ಬೆಲೆ ಇಳಿಸಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಸೋಲಿಸುತ್ತಾರೆ ಎಂದರೆ ಈ ದೇಶದ ಜನರ ಬುದ್ದಿ ಮಟ್ಟ ಯಾವ ತೆರನಾದದ್ದು ಎಂದು ಆಶ್ಚರ್ಯವಾಗುತ್ತದೆ. ಪೆಟ್ರೋಲ್-ಡೀಸಲ್ ಗಿಂತ ಮುಖ್ಯವಾದದ್ದು ದೇಶದ ಭದ್ರತೆ ಮತ್ತು ಅಭಿವೃದ್ದಿ. ಜೀವದ ಹಂಗು ತೊರೆದು ಅದನ್ನು ನಿರ್ವಹಿಸುತ್ತಿರುವವರು ಮೋದಿ. ಆದರೆ ಜನರಿಗೆ ಅದು ನಗಣ್ಯ, ಅವರಿಗೇನಿದ್ದರೂ ದೇಶವನ್ನು ಒಡೆಯುವ, ತೆರಿಗೆ ಹಣವನ್ನು ನುಂಗುವ ಕಳ್ಳ-ದೇಶದ್ರೋಹಿಗಳೆ ಬೇಕು ಎಂತ ಕರ್ಮ!

ಪೆಟ್ರೋಲ್-ಡೀಸಲ್ ಬೆಲೆ ಏರಿತು ಅದಕ್ಕೆ ನಾವು ಮೋದಿಗೆ ಓಟು ಕೊಡುವುದಿಲ್ಲ ಎಂದು ತೀರ್ಮಾನಿಸುವ ಮುನ್ನ ಒಮ್ಮೆ ಯೋಚಿಸಿ:

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಮೋದಿ ಸರಕಾರ ಪೆಟ್ರೋಲ್-ಡೀಸೆಲ್ ಬೆಲೆ ಇಳಿಸಲಿಲ್ಲ ಏಕೆಂದರೆ ದೇಶದಲ್ಲಿ ಅತಿ ದೊಡ್ಡ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿತ್ತು. ಈ ಸಬ್ಸಿಡಿ ಜನರ ಮೇಲೆ ತೆರಿಗೆ ಹಾಕಿ ಸಂಗ್ರಹಣೆ ಮಾಡಲಾಗುತ್ತಿತ್ತು. ಇದನ್ನು ಸರಿದೂಗಿಸಲು ವಿಕಾಸ ಕಾರ್ಯಗಳಿಗೆ ಮೀಸಲಿಡಬೇಕಾದ ಹಣವನ್ನು ಕಡಿತ ಮಾಡಬೇಕಾಗಿತ್ತು. ಇದರಿಂದ ಸರಕಾರಕ್ಕೆ ಒಂದು ವರ್ಷಕ್ಕೆ 1 ಲಕ್ಷ 20 ಸಾವಿರ ಕೋಟಿ ರುಪಾಯಿಗಳಷ್ಟು ಹಣಕಾಸಿನ ಕೊರತೆ ಎದುರಾಗುತ್ತಿತ್ತು. ಆದರೆ ಈಗ ಹಾಗಿಲ್ಲ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಆದ ಕೂಡಲೆ ಅದರಲ್ಲಿ ಒಂದು ಭಾಗಾಂಶವನ್ನು ಗ್ರಾಹಕರಿಗೆ ನೀಡಲಾಯಿತು. ಯಾವಾಗ ಕೇಂದ್ರ ಸರಕಾರ ಬೆಲೆ ಇಳಿಸಿತೋ ಆ ಕೂಡಲೆ ರಾಜ್ಯಗಳು ತೈಲದ ಮೇಲೆ VAT ಹೇರಿ ಬಿಟ್ಟವು. ಇದರ ಪರಿಣಾಮ ನೇರವಾಗಿ ಬಿದ್ದದ್ದು ಗ್ರಾಹಕರ ಮೇಲೆ ಹಾಗೂ ದೋಷಾರೋಪಣೆ ಮೋದಿ ಮೇಲೆ!! ರಾಜ್ಯಗಳು ಮಾಡುವ ತಪ್ಪಿಗೆ ಮೋದಿಗೆ ಓಟು ಕೊಡುವುದಿಲ್ಲ, ಹೇಗಿದೆ ನ್ಯಾಯ?

ಇನ್ನು ತೈಲ ಬೆಲೆ ಇಳಿಕೆಯಿಂದಾಗುವ ಲಾಭದ ಇನ್ನೊಂದು ಭಾಗಾಂಶದಲ್ಲಿ 42% ಮತ್ತೆ ರಾಜ್ಯ ಸರಕಾರಗಳಿಗೆ ಹೋಗುತ್ತದೆ. ಹಣಕಾಸು ಸಮಿತಿಯ ನಿರ್ದೇಶದ ಪ್ರಕಾರ ಈ ಹಣವನ್ನು ರಾಜ್ಯಗಳಿಗೆ ಕೊಡುತ್ತಿದ್ದರೂ ಮತ್ತೆ ತಮ್ಮ ತಮ್ಮ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು VAT ಹಾಕುತ್ತವೆ. ಇದರಿಂದಾಗಿ ರಾಜ್ಯಗಳಲ್ಲಿ ತೈಲ ಬೆಲೆ ಏರಿಕೆ ಆಗುತ್ತದೆ ಹೊರತು ಕೇಂದ್ರ ಸರಕಾರದಿಂದಾಗಿ ತೈಲ ಬೆಲೆ ಹೆಚ್ಚಳ ಆಗುವುದಲ್ಲ. ಇನ್ನು ತನ್ನ ಪಾಲಿನ ಅಬಕಾರಿ ಸುಂಕವನ್ನು, ಅಂದರೆ ಲಾಭಾಂಶದ ತನ್ನ ಭಾಗವನ್ನು ಮೋದಿ ಸರಕಾರ ರಾಷ್ಟ್ರೀಯ ರಾಜ ಮಾರ್ಗ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ದಿಗಾಗಿ ಮತ್ತು ಕೃಷಿ ಕಾರ್ಯಗಳಿಗೆ ವಿನಿಯೋಗಿಸುತ್ತದೆ. ಈಗ ಹಿಂದಿನಂತೆ ವರ್ಷಾಂತ್ಯದಲ್ಲಿ ಹಣಕಾಸಿನ ಕೊರತೆ ಅನುಭವಿಸುವುದಿಲ್ಲ ಮತ್ತು ವಿಕಾಸದ ಹಣ ಕಡಿತ ಮಾಡಬೇಕಾಗಿಲ್ಲ.

ಇನ್ನು ಲಾಭಾಂಶದ ನಾಲ್ಕನೆ ಭಾಗವನ್ನು ಭಾರತದ ತೈಲ ಕಂಪನಿಗಳಿಗೆ ಕೊಡಲಾಗುತ್ತದೆ. ಕೆಲವೊಮ್ಮೆ, ತೈಲ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿರುವಾಗ ತೈಲ ಖರೀದಿಸಿರುತ್ತವೆ. ಭಾರತದಲ್ಲಿ ತೈಲವನ್ನು ಮಾರುವಾಗ ಕಚ್ಚಾ ತೈಲದ ಬೆಲೆ ಇಳಿದಿರುತ್ತದೆ. ಇದರಿಂದ ಕಂಪನಿಗಳು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಒಂದೊಂದು ಬಾರಿ ತೈಲ ಕಂಪನಿಗಳು 40 ಸಾವಿರ ಕೋಟಿ ರುಪಾಯಿಗಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಅಂತಹ ಸಂಧರ್ಭದಲ್ಲಿ ತನ್ನ ಪಾಲಿನ ಲಾಭಾಂಶದ ಒಂದು ಭಾಗವನ್ನು ಕೇಂದ್ರ, ತೈಲ ಕಂಪನಿಗಳಿಗೆ ನೀಡಿ ಅವುಗಳು ದಿವಾಳಿ ಏಳದಂತೆ ನೋಡಿಕೊಳ್ಳುದೆ.

ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಿರುವುದರಿಂದ ತೈಲ ಬೆಲೆ ಏರಿಕೆ ಆಗಿದೆ ಆದರೆ ಅದಕ್ಕೆ ಮೋದಿ ಹೊಣೆ ಅಲ್ಲ. ತೈಲ ಬೆಲೆ ಇಳಿಕೆ ಮಾಡಬೇಕಾದದ್ದು ರಾಜ್ಯ ಸರಕಾರಗಳು. ರಾಜ್ಯಗಳು ತೈಲದ ಮೇಲೆ VAT ಹೊರಿಸಿ, ಆರೋಪ ಮಾತ್ರ ಮೋದಿ ಮೇಲೆ ಹಾಕಿ ಮಳ್ಳಿಯಂತೆ ನಾಟಕ ಆಡುತ್ತಿವೆ. ಕೇಂದ್ರ ಸರಕಾರಕ್ಕೆ ಪ್ರತಿ ಲೀಟರ್ ಪೆಟ್ರೋಲಿಗೆ ದೊರೆಯುವುದು ಕೇವಲ19.48 ರೂ. ಮತ್ತು ಡೀಸಲಿಗೆ 15.33 ರೂ ಅಬಕಾರಿ ಸುಂಕ. ಈ ಅಬಕಾರಿ ಸುಂಕವನ್ನು ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ ಮೋದಿ.

ಇನ್ನು ತೈಲವನ್ನು GST ಅಡಿಯಲ್ಲಿ ತರಲು ಮಾತುಕತೆಗಳು ನಡೆಯುತ್ತಿವೆ. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ GST ಅಡಿಯಲ್ಲಿ ಬಂದರೆ ದೇಶದಲ್ಲಿ ತೈಲ ಬೆಲೆ ಏನೋ ಇಳಿಕೆಯಾಗುತ್ತದೆ ಆದರೆ ಕೇಂದ್ರಕ್ಕೆ ಬಹು ದೊಡ್ಡ ನಷ್ಟವಾಗುತ್ತದೆ. ತೈಲದ ಮೇಲಿನ ಸುಂಕದಿಂದಾಗಿ 2016-17ರಲ್ಲಿ ಕೇಂದ್ರಕ್ಕೆ 2,43,000 ಕೋಟಿ ರುಪಾಯಿ ಮತ್ತು ರಾಜ್ಯಗಳಿಗೆ 1,66,000 ಕೋಟಿ ರುಪಾಯಿಗಳಷ್ಟು ಲಾಭ ಬಂದಿರುತ್ತದೆ. ತೈಲವನ್ನು GST ಅಡಿಗೆ ತಂದರೆ ನಿಶ್ಚಿತವಾಗಿಯೂ ಕೇಂದ್ರಕ್ಕೆ ಹೆಚ್ಚು ಹೊಡೆತ ಬೀಳುತ್ತದೆ ಮತ್ತು ದೇಶದ ಅಭಿವೃದ್ದಿ ಕಾರ್ಯಗಳಿಗೆ ಆರ್ಥಿಕ ಕೊರತೆ ಅನುಭವಿಸಬೇಕಾಗುತ್ತದೆ. ನೆನಪಿಡಿ ಕೇಂದ್ರ ಸಂಗ್ರಹಣೆ ಮಾಡುವ GSTಯಲ್ಲಿ 80% ಮತ್ತೆ ರಾಜ್ಯಗಳಿಗೇ ಹೋಗುತ್ತವೆ. ಕೇಂದ್ರ ತನಗೆ ಸಿಗುವ 20% ತೆರಿಗೆ ಹಣದಲ್ಲೆ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಿ.

ತೈಲ ಬೆಲೆ ಏರಿಕೆಗೆ ಮೋದಿ ಕಾರಣವಲ್ಲದಿದ್ದರೂ ಅವರ ಮೇಲೆ ಅಪವಾದ ಹೊರಿಸಲಾಗುತ್ತಿದೆ. ಕೇವಲ ಪೆಟ್ರೋಲ್-ಡೀಸಲ್ ಗಾಗಿ ಮೋದಿಯನ್ನು ಸೋಲಿಸುವಿರೋ? ದೇಶದ ಭದ್ರತೆ ಜೊತೆ ಆಟ ಆಡುವಿರೋ? ಅಥವಾ ಪೆಟ್ರೋಲ್-ಡೀಸಲ್ ಗೆ ಎಷ್ಟು ರುಪಾಯಿಯಾದರೂ ಚಿಂತೆ ಇಲ್ಲ ಎಂದು ತೀರ್ಮಾನಿಸಿ ಮೋದಿಯನ್ನು ಮತ್ತೆ ಗೆಲ್ಲಿಸಿ ದೇಶದ ಅಭಿವೃದ್ದಿಯಲ್ಲಿ ಕಿರುಕಾಣಿಕೆ ಸಲ್ಲಿಸುವಿರೋ?

-ಶಾರ್ವರಿ

Tags

Related Articles

Close