ಇತಿಹಾಸ

ಭಕ್ತಿಯಾರ್ ಖಿಲ್ಜಿ ಎಂಬ ಮಾತಾಂಧನು ಭಾರತದ ಗೌರವದ ಪ್ರತೀಕವಾಗಿದ್ದ ನಳಂದಾ ವಿಶ್ವ ವಿದ್ಯಾಲಯವನ್ನು ಸಾವಿರಾರು ವಿದ್ಯಾರ್ಥಿಗಳ ಸಮೇತ ಸುಟ್ಟು ಬೂದಿಯಾಗಿಸಿದನೆಂಬ ವಿಚಾರ ಗೊತ್ತೆ?

ಕಾಲಮಾನ: 400-1100 AD
ವಿಸ್ತಾರ: 1.5 ಲಕ್ಷ ವರ್ಗ ಫೀಟ್
ಕಕ್ಷೆಗಳ ಸಂಖ್ಯೆ: 800
ತರಗತಿಯ ಕೋಣೆಗಳು: 100ಕ್ಕೂ ಹೆಚ್ಚು
ಕಟ್ಟಡಗಳು: 300
ವಿದ್ಯಾರ್ಥಿಗಳ ಸಂಖ್ಯೆ: 10000
ಗುರುಗಳ ಸಂಖ್ಯೆ: 2000
ಅಧ್ಯಯನ ವಿಷಯಗಳು: ವಿಜ್ಞಾನ, ತತ್ವಜ್ಞಾನ, ಸಂಖ್ಯಾ ಶಾಸ್ತ್ರ, ಯೋಗ, ವೇದ, ಪಾಲಿ, ಮಾಧ್ಯಮಿಕ ಮತ್ತು ತಂತ್ರ ಶಾಸ್ತ್ರ.. ಹೀಗೆ ಹತ್ತು ಹಲವು ವಿಷಯಗಳು.
ಮೂರು ಮಹಡಿಯ ಪುಸ್ತಕಾಲಯದಲ್ಲಿ ಪುಸ್ತಕಗಳ ಸಂಖ್ಯೆ: 90 ಲಕ್ಷಕ್ಕೂ ಅಧಿಕ

ಇದು ವಿಶ್ವ ಪ್ರಸಿದ್ದ ನಳಂದಾ ವಿಶ್ವವಿದ್ಯಾಲಯದ ಕಿರು ಪರಿಚಯ. ಭಾರತದ ಬಿಹಾರದಲ್ಲಿ ಗುಪ್ತ ವಂಶದ ಶಾಸಕ ಕುಮಾರ ಗುಪ್ತನಿಂದ ನಿರ್ಮಿಸಿಲಾದ ನಳಂದಾ ವಿಶ್ವವಿದ್ಯಾಲಯ ಬರೋಬ್ಬರಿ 800 ವರ್ಷಗಳ ಕಾಲ ದಶ ದಿಕ್ಕುಗಳಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿತ್ತು. ನಳಂದಾ ವಿಶ್ವವಿದ್ಯಾಲಯದ ಪ್ರಸಿದ್ದಿ ಕೇಳಿ ದೇಶ-ವಿದೇಶದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಭಾರತದತ್ತ ದಾಪುಗಾಲು ಹಾಕುತ್ತಿದ್ದರು. ಬೌಧ್ದ ಧರ್ಮದ ಪಾಲಾ, ಹಿಂದು ಶಾಸಕರಾದ ಗುಪ್ತ ಮತ್ತು ಸೇನಾ ಎಂಬ ರಾಜರುಗಳ ಶಾಸನ ಕಾಲದಲ್ಲಿ ನಳಂದಾ ನಳನಳಿಸುತ್ತಿತ್ತು.

ವಿಶ್ವ ವಿಖ್ಯಾತ ಪರ್ಯಟಕರಾದ ಹೂ-ಎನ್-ತ್ಸಾಂಗ್ ಮತ್ತು ಆಯಿ-ತ್ಸಿಂಗ್ ಕೂಡಾ ನಳಂದಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ಚೀನ, ಜಪಾನ್, ಕೊರಿಯಾ, ಪರ್ಶಿಯಾ, ಟಿಬೆಟ್, ಇಂಡೋನೇಶಿಯಾ, ಟರ್ಕಿ ಮೊದಲಾದ ಕಡೆಗಳಿಂದ ವಿಸ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದರು. ವಿಶ್ವದಲ್ಲೆ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿತ್ತು ನಳಂದಾ. ನಳಂದಾದಲ್ಲಿ ಮೂರು ಮಹಡಿಗಳ ಪುಸ್ತಕಾಲಯವೆ ಇತ್ತು ಮತ್ತು ಅದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ತೊಂಬತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳಿದ್ದವು ಎಂದರೆ ಅದರ ವೈಶ್ಯಾಲ್ಯತೆ ಮತ್ತು ಅಧ್ಯಯನ ಸಾಮಾಗ್ರಿಗಳ ಅಗಾಧತೆ ಬಗ್ಗೆ ನೀವೆ ಅಂದಾಜಿಸಿ. 1500 ಶಿಕ್ಷಕರು 8500 ವಿದ್ಯಾರ್ಥಿಗಳಿಗೆ ದಿನದಲ್ಲಿ ನೂರು ಉಪನ್ಯಾಸಗಳನ್ನು ಎಡೆಬಿಡದೆ ತೆಗೆದುಕೊಳ್ಳುತ್ತಿದ್ದರು ಎಂದರೆ ಅಲ್ಲಿಯ ಶಿಕ್ಷಣ ವ್ಯವಸ್ಥೆ ಎಷ್ಟು ಅಚ್ಚುಕಾಟ್ಟಾಗಿದ್ದಿರಬೇಕು!! ನಳಂದಾ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣವನ್ನೊದಗಿಸುತ್ತಿತ್ತು. ಶಿಕ್ಷಣಕ್ಕಾಗಿ ಒಂದು ಪೈಸೆಯೂ ವಿದ್ಯಾರ್ಥಿಗಳಿಂದ ತೆಗೆದುಕೊಳ್ಳುತ್ತಿರಲಿಲ್ಲ. ರಾಜ-ಮಹಾರಾಜ-ಶ್ರೀಮಂತರು ಕೊಡುವ ದಾನಗಳಿಂದ ಇಡಿಯ ವಿಶ್ವವಿದ್ಯಾಲಯವೆ ನಡೆಯುತ್ತಿತ್ತು.

ಎಲ್ಲವೂ ಸರಿಯಾಗಿಯೆ ನಡೆಯುತ್ತಿತ್ತು. ಆದರೆ…. 1193 ರಲ್ಲಿ ಮುಹಮ್ಮದ್ ಭಕ್ತಿಯಾರ್ ಖಿಲ್ಜಿ ಎಂಬ ಮುಗಲ ಸೇನಾಧಿಪತಿಯ ಕುದೃಷ್ಟಿ ನಳಂದಾ ವಿಶ್ವವಿದ್ಯಾಲಯದ ಮೇಲೆ ಬಿತ್ತು. ಈ ಭಕ್ತಿಯಾರ್ ಖಿಲ್ಜಿಯೆಂಬ ನರ ರಾಕ್ಷಸನನ್ನು ಬಾಂಗ್ಲಾದೇಶದ ಜನರು ದೇವರಂತೆ ಪೂಜಿಸುತ್ತಾರೆ. ಭಾರತದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರ ಮಾಡಿದ ಜಿಹಾದಿ ಈತನೆ. ನಳಂದಾ ವಿಶ್ವವಿದ್ಯಾಲಯದ ಕೀರ್ತಿಯ ಕಥೆಗಳು ಈ ಮತಾಂಧನ ಕಿವಿಗೆ ಬೀಳುತ್ತದೆ. ತನ್ನ ಮುಗಲ್ ಹಂದಿಗಳ ಸೇನೆಯೊಡನೆ ಆತ ಏಕಾ ಏಕಿ ನಳಂದಾ ವಿಶ್ವವಿದ್ಯಾಲಯಕ್ಕೆ ನುಗ್ಗುತ್ತಾನೆ. ವಿದ್ಯಾಲಯದೊಳಗೆ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಶಸ್ತ್ರಾಸ್ತ್ರಗಳನ್ನು ಕೊಡು ಹೋಗುವ ಅವಕಾಶವಿರಲಿಲ್ಲ. ಕೇವಲ ಜ್ಞಾನಾರ್ಜನೆಯ ಏಕೈಕ ಉದ್ದೇಶದಿಂದ ನಿರ್ಮಾಣವಾದ ನಳಂದಾ ವಿದ್ಯಾಲಯದಲ್ಲಿ ಶಸ್ತ್ರಾಗರವೂ ಇರಲಿಲ್ಲ. ಇದನ್ನು ಅರಿತಿದ್ದ ಖಿಲ್ಜಿ ವಿದ್ಯಾಲಯಕ್ಕೆ ನುಗ್ಗಿ ಬಡಪಾಯಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ತರಿ ತರಿದು ಹಾಕಿದ. ಬ್ರಾಹ್ಮಣರ ತಲೆ ಬೋಳಿಸಿ ಅವರ ಕತ್ತನ್ನು ಸೀಳಿ ಬಿಟ್ಟ.

ಪ್ರಾಣ ರಕ್ಷಣೆಗೂ ಅವಕಾಶವಿರದಂತೆ ಇಡಿಯ ನಳಂದಾವನ್ನೆ ಸುತ್ತುವರಿದ. ತಮ್ಮ ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಪುಸ್ತಕಾಲಯದಲ್ಲಿ ಅವಿತು ಕುಳಿತರು. ಅಲ್ಲಿಗೆ ಲಗ್ಗೆ ಇಟ್ಟ ಮತಾಂಧ ಪುಸ್ತಕಾಲಯಕ್ಕೆ ಬೆಂಕಿ ಇಡುವಂತೆ ಆಜ್ಞೆ ಇತ್ತ. ಅದನ್ನು ತಿಳಿದ ಬೌದ್ದ ವಿದ್ಯಾರ್ಥಿಯೊಬ್ಬ ಪುಸ್ತಕಗಳನ್ನು ಎದೆಗವುಚಿಕೊಂಡು ದಯವಿಟ್ಟು ಪುಸ್ತಕಗಳನ್ನು ಸುಡಬೇಡಿ ಎಂದು ಪರಿ ಪರಿಯಾಗಿ ವಿನಂತಿಕೊಂಡ. ಆದರೆ ಆತನ ಶಿರಛ್ಛೇದ ಮಾಡಿದ ಖಿಲ್ಜಿ, ಇಡಿಯ ಪುಸ್ತಕಾಲಕ್ಕೆ ಅದರಲ್ಲಿರುವ ವಿದ್ಯಾರ್ಥಿಗಳ ಸಮೇತ ಬೆಂಕಿ ಇಟ್ಟು ಬೂದಿ ಮಾಡಿ ಬಿಟ್ಟ. ಪುಸ್ತಕಾಲಯದ ಪುಸ್ತಕಗಳು ಸುಟ್ಟು ಭಸ್ಮವಾಗಲು ಬರೋಬ್ಬರಿ ಮೂರು ತಿಂಗಳು ಹಿಡಿಯಿತೆಂದರೆ ಒಂದೆಡೆ ಆ ಪುಸ್ತಕಾಲಯದ ಅಗಾಧತೆಯ ಬಗ್ಗೆ ಹೆಮ್ಮೆ ಎನಿಸಿದರೆ, ಮತ್ತೊಂದೆಡೆ ಜೀವಂತ ಸುಟ್ಟು ಭಸ್ಮವಾದ ಹಿಂದೂಗಳ ಸ್ಥಿತಿ ಯೋಚಿಸಿ ಹೊಟ್ಟೆಗೆ ಬೆಂಕಿ ಇಟ್ಟಂತಾಗುವುದು. ಅಂದು ಭಾರತದ ಸನಾತನ ಸಂಸ್ಕೃತಿಗೆ ಸಂಬಂಧ ಪಟ್ಟ ಎಷ್ಟೊ ಪುಸ್ತಕಗಳು ಸುಟ್ಟು ಬೂದಿಯಾದವು. ಪುಸ್ತಕಗಳ ಮೇಲೂ ತನ್ನ ರೋಷ ತೋರಿದ ಖಿಲ್ಜಿಗೆ ಧಿಕ್ಕಾರ.

ತನ್ನ ಕ್ರೌರ್ಯದ ಪರಾಕಾಷ್ಠೆ ಮೆರೆದ ಖಿಲ್ಜಿ ದಾರಿಯಲ್ಲಿ ಸಿಕ್ಕಿದವರನ್ನೆಲ್ಲ ಕೊಚ್ಚಿ ಹಾಕುತ್ತಾ ಸಾಗಿದ. ಅಲ್ಲಿಂದ ಬಂಗಾಳ ತಲುಪಿದ ಆತ ಅಲ್ಲಿಯ ಹಿಂದೂಗಳನ್ನು ಸಾಮೂಹಿಕವಾಗಿ ಮತಾಂತರ ಮಾಡಿದ. 1235 ರಲ್ಲಿ ಟಿಬ್ಬಟ್ಟಿನ ಅನುವಾದಕಾರನಾದ ಚಾಂಗ್ ಲೋತ್ಸಾವಾ ನಳಂದಾಕ್ಕೆ ಭೇಟಿ ನೀಡುತ್ತಾನೆ. ಒಂದು ಕಾಲದಲ್ಲಿ ನಳ ನಳಿಸುತ್ತಿದ್ದ ನಳಂದಾ ಅಕ್ಷರಷಃ ಸ್ಮಶಾನವಾಗಿರುತ್ತದೆ. ಆದರೂ ಅಲ್ಲಿ 70 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು ಎನ್ನುವುದನ್ನು ಆತ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಸ್ಮಶಾನ ಸದೃಶ ನಳಂದಾದಲ್ಲಿ ಎಪ್ಪತ್ತು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು!! ಸನಾತನವನ್ನು ಅಳಿಸಲಾಗದು ಎನ್ನುವುದು ಇದಕ್ಕೆನೆ. ಕಡಿದರೂ ಮತ್ತೆ ಚಿಗುರುವುದೆ ಸನಾತನ. ಯಾವ ಮತಾಂಧ ಜಿಹಾದಿಗಳು ಬಂದರೂ ಸನಾತನವನ್ನು ಮುಗಿಸಲಾಗಲಿಲ್ಲ, ಬದಲಾಗಿ ಅದು ಇನ್ನೂ ಗಟ್ಟಿಯಾಗಿ ಬೇರೂರಿತು. ಭಾರತಕ್ಕೆ ಸಂಬಂಧ ಪಟ್ಟ ಹಲವಾರು ದಾಖಲೆಗಳು ಅಂದು ಸುಟ್ಟು ಕರಕಲಾದವು. ನಳಂದಾದ ಸ್ಮೃತಿಯನ್ನು ಹೊರತು ಪಡಿಸಿ ಅಲ್ಲಿ ಏನೂ ಉಳಿಯಲಿಲ್ಲ. ಸ್ಮಶಾನದಂತಿರುವ ನಳಂದಾ ತನ್ನ ಯಶೋಗಾಥೆ ಮತ್ತು ತನ್ನ ಮೇಲಾದ ಬರ್ಬರತೆ ಎರಡರ ಸಾಕ್ಷಿಯಾಗಿ ನಿಂತಿದೆ.

ನಳಂದಾದ ನಿಟ್ಟುಸಿರು, ಬರ್ಬರತೆಗೆ ಸಾಕ್ಷಿಯಾದ ಕಲ್ಲುಗಳ ಮೂಕ ರೋದನೆ, ಮತಾಂಧರ ಕ್ರೌರ್ಯಕ್ಕೆ ಸಿಲುಕಿ ಸುಟ್ಟು ಕರಕಲಾದವರ ಆಕ್ರಂದನ ನಮಗಾರಿಗೂ ಕೇಳಿಸಲೆ ಇಲ್ಲ. ಪಾಶ್ಚಾತ್ಯ ಮನಸ್ಥಿತಿಯ ಗುಲಾಮರಾದ ನಾವು ಅವರ ಉಚ್ಚೆಯನ್ನೂ ತೀರ್ಥವೆಂದು ಪರಿಗಣಿಸಿ ಕುಡಿಯುತ್ತೇವೆ. ಆದರೆ ವಿಶ್ವದಲ್ಲೆ ಮಾದರಿಯಾಗಿದ್ದ ನಮ್ಮ ಗುರುಕುಲ ಶಿಕ್ಷಣ ಪದ್ಧತಿಗೆ ಛೀ ಥೂ ಎನ್ನುತ್ತೇವೆ. ಭಾರತ ಬದಲಾಗಬೇಕಿದ್ದರೆ ಮೊದಲು ಗುಲಾಮಗಿರಿಯ ಶಿಕ್ಷಣ ವ್ಯವಸ್ಥೆಯಿಂದ ಹೊರ ಬಂದು ಗುರು-ಶಿಷ್ಯ ಪರಂಪರೆಯನ್ನು ಮತ್ತೆ ಅಸ್ಥಿತ್ವಕ್ಕೆ ತರಬೇಕು. ನಳಂದಾ ಮತ್ತೆ ನಳನಳಿಸಬೇಕು. ಹಾಗಾದಲ್ಲಿ ಭಾರತ ಮತ್ತೊಮ್ಮೆ ವಿಶ್ವ ಗುರುವಾಗುತ್ತದೆ ಇದು ಖಂಡಿತ ಸತ್ಯ…

-ಶಾರ್ವರಿ

Tags

Related Articles

Close