ಇತಿಹಾಸದೇಶ

‘ಕಪ್ಪು ಹುಲಿ’ಯೆಂದೇ ಪ್ರಸಿದ್ಧನಾಗಿದ್ದ ಭಾರತದ ಗೂಢಾಚಾರನೊಬ್ಬ ಪಾಕಿಸ್ಥಾನದ ಸೇನೆಯಲ್ಲಿ ‘ಮೇಜರ್’ ಆಗಿ ಕರ್ತವ್ಯ ನಿರ್ವಹಿಸಿದ್ದ!!

ಕಲ್ಪಿಸಿಕೊಳ್ಳಿ!! ಶತ್ರು ರಾಷ್ಟ್ರದಲ್ಲಿದ್ದೀರಿ! ನಿಮ್ಮ ತಾಯ್ನಾಡು ನಿಮಗೊಂದು ಕರ್ತವ್ಯ ನಿರ್ವಹಿಸಿದೆ! ಅಪ್ಪಿ ತಪ್ಪಿ ಏನಾದರೂ ನಿಮ್ಮ ನಿಜ ಪರಿಚಯ ಆ ರಾಷ್ಡ್ರದಲ್ಲಿರುವ ಒಬ್ಬರಿಗೆ ಗೊತ್ತಾಯಿತೆಂದರೆ, ಚಿತ್ರಹಿಂಸೆ ಕೊಟ್ಟು ನಿಮ್ಮ ಜೀವ ತೆಗೆಯುತ್ತಾರೆ!! ಇತ್ತ, ತಾಯ್ನಾಡಿಯಲ್ಲಿಯೂ ನಿಮ್ಮ ಕರ್ತವ್ಯವೊಂದು ಸಮಾಜದೆದುರಿಗೆ ಬರುವುದೇ ಇಲ್ಲ!

ನಿಮ್ಮ ಕುಟುಂಬ, ಮನೆ ಮಠ ಮಕ್ಕಳನ್ನೆಲ್ಲ ಬಿಟ್ಟು ಶತ್ರು ರಾಷ್ಟ್ರದಲ್ಲಿ ಕೆಲಸ ನಿರ್ವಹಿಸುವ ನಿಮಗೆ ಹೆಜ್ಜೆ ಹೆಜ್ಜೆಗೂ ವಿರೋಧಿಗಳು! ಶತ್ರುಗಳು! ನಿಮ್ಮ ಒರಿಜಿನಲ್ ಐಡೆಂಟಿಟಿಗೆ ಅಲ್ಲಿ ಯಾವ ಬೆಲೆಯೂ ಇಲ್ಲ!! ಪ್ರತಿ ಕ್ಷಣವೂ ಸಹ, ನೀವು “ನಿಶ್ಚಿಂತೆ” ಎಂಬುದನ್ನು ಅನುಭವಿಸಲಾರಿರಿ!

ಇಂತಹ ಸನ್ನಿವೇಶದಲ್ಲಿ ನೀವು ಬದುಕಬಲ್ಲಿರಾ?!

ರವೀಂದ್ರ ಖೌಶಿಕ್!!!

Image result for ravindra kaushik

ಬಹುಷಃ ಇವತ್ತಿನವರಿಗೆ ಆತನ ಬಗ್ಗೆ ಗೊತ್ತಿರಲಿಕ್ಕಿಲ್ಲ! ಭಾರತದ ಗೂಢಚಾರನಾಗಿದ್ದ ಈತ ಪಾಕಿಸ್ಥಾನದ ಸೇನೆಯಲ್ಲಿ ‘ಮೇಜರ್’ ಆಗಿ ಕಾರ್ಯ ನಿರ್ವಹಿಸಿದ್ದು ಗೊತ್ತಾಗುವ ವೇಳೆಗಾಗಲೇ ಪಾಕಿಸ್ಥಾನದ ಸಂಪೂರ್ಣ ಮಾಹಿತಿಗಳು ಇತ್ತ ಭಾರತವನ್ನು ತಲುಪಿದ್ದವು!

ರಾಜಸ್ಥಾನದ ಗಂಗಾನಗರದಲ್ಲಿ ಜನಿಸಿದ ಕೌಶಿಕ್ ಗೆ ಬಾಲ್ಯದಿಂದಲೂ ರಙಗಮಂದಿರಗಳಲ್ಲಿ ನಟಿಸುವ ಆಸಕ್ತಿ ಹೆಚ್ಚೇ ಇತ್ತು. ತಾನೊಬ್ಬ ಸಿನಿಮಾ ನಟನಾಗಬೇಕೆಂದುಕೊಂಡಿದ್ದ ಕೌಶಿಕ್ ನ ನಟನಾ ಶೈಲಿ ಗೂಢಚಾರನಾಗಿಸುವಲ್ಲಿ ಕರೆದೊಯ್ದು ಬಿಟ್ಟಿತ್ತು!

Image result for ravindra kaushik

ಭಾರತೀಯ ಗುಪ್ತಚರ ಇಲಾಖೆ ರಾಷ್ಟ್ರೀಯ ನಾಟಕ ಮಂಡಳಿಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಒಬ್ಬ ಅಸಾಧಾರಣ ಪ್ರತಿಭೆಯನ್ನು ಕಂಡು ಹಿಡಿಯಿತು. 1975 ರಲ್ಲಿ ಆತ ಗುಪ್ತಚರ ಇಲಾಖೆಯವರ ಕಣ್ಣಿಗೆ ಬಿದ್ದಿದ್ದ! ತದನಂತರ ಕೌಶಿಕ್ ನನ್ನು ಯಾರು ಸಂಪರ್ಕಿಸಿದರೋ, ಯಾರು ಆತನನ್ನು ಇಲಾಖೆಗೆ ಸೇರಿಸಿದರೋ ಗೊತ್ತಾಗಲಿಲ್ಲವಾದರೂ ಅವನ ಬದುಕಿನ ತಿರುವೊಂದು ಪ್ರಾರಂಭವಾಗಿದ್ದು ಅಲ್ಲಿಯೇ!’

2001 ರಲ್ಲಿ ಪಾಕಿಸ್ಥಾನದಲ್ಲಿ ತೀರಿಕೊಂಡ ಕೌಶಿಕ್ ನ ಗುಪ್ತ ಪತ್ರಗಳೆಲ್ಲ ಬಯಲಾದವು! ಭಾರತದಲ್ಲೊನ ತಾಯಿಗೆ ಪತ್ರ ಬರೆಯುತ್ತಿದ್ದ ಕೌಶಿಕ್ ಗೆ ಅದನ್ನು ತಲುಪಿಸಲೇನೂ ಕಷ್ಟವಾಗುತ್ತಿರಲಿಲ್ಲ. ಬರೋಬ್ಬರಿ 30 ವರ್ಷಗಳ ಕಾಲ ಅನುಭವವಿದ್ದ ಕೌಶಿಕ್ ಅನಾಯಾಸವಾಗಿ ಪತ್ರ ತಲುಪುವಂತೆ ನೋಡಿಕೊಳ್ಳುತ್ತಿದ್ದ!

ಆದರೆ, ಆತನ 30 ವರ್ಷದ ಗೌಪ್ಯ ಬದುಕನ್ನು ಆತನ ಪತ್ರಗಳು ತೆರೆದಿಟ್ಟಿದ್ದವು!

ಭಾರತ ಅನಿವಾರ್ಯವಾಗಿ ರಕ್ತ ಚೆಲ್ಲಿದೆ! ೧೯೬೧ ರಲ್ಲಿ ಚೀನಾದ ಜೊತೆ ಮತ್ತು, ೧೯೬೫, ೧೯೭೧ ರಲ್ಲಿ ಎರಡು ಬಾರಿ ಪಾಕಿಸ್ಥಾನದ ಜೊತೆ ಮಹಾ ಯುದ್ಧ ಕ್ಕಿಳಿದಿದ್ದ ಭಾರತಕ್ಕವತ್ತು ಅನಿವಾರ್ಯವಾಗಿ ಹೋಗಿತ್ತು! ಹೋರಾಡದೇ ಹೋದರೆ, ದೇಶದ ಘನತೆಯ ಪ್ರಶ್ನೆ! ಕೂತು ಬಗೆ ಹರಿಸಲಾಗದಷ್ಟು ಜಾಣತನ ತೋರದೇ, ಅತ್ತ ರಕ್ಷಣಾ ಪಡೆಗಳನ್ನೂ ತೀರಾ ಕಡೆಗಣಿಸಿದ್ದ ಅವತ್ತಿನ ಭಾರತ ಪ್ರಧಾನ ಮಂತ್ರಿಗಳು ಬಹುಷಃ ಪರೋಕ್ಷವಾಗಿಯೇ
ಭಾರತಕ್ಕಾದ ಹಾನಿಗೆ ಕಾರಣರಾಗಿ ಹೋದರು!

Image result for ravindra kaushik

ಈ ಮೂರೂ ಯುದ್ಧಗಳು, ಭಾರತದ ದಿಕ್ಕೊಂದನ್ನು ಬದಲಾಯಿಸಿತಷ್ಟೇ! ಭಾರತದ ರಕ್ಷಣಾ ಸಿಬ್ಬಂದಿಗಳು ಇದ್ದ ಬದ್ದ ಶಸ್ತ್ರವನ್ನೇ ಪಣಕ್ಕಿಟ್ಟರು!ಇಂಟೆಲಿಜೆನ್ಸ್ ಬ್ಯೂರೋ ಅಂತು, ಸತತವಾಗಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಲೇ ಇತ್ತು! ಅಷ್ಟಾದರೂ, ಕೆಲವೊಂದು ಕರ್ತವ್ಯಗಳನ್ನು
ನಿರ್ವಹಿಸಲು ಸಾಧ್ಯವಾಗದ ಕಾರಣ, ಪಾಕಿಸ್ಥಾನದಲ್ಲಿ ನಡೆಯುವ ರಹಸ್ಯ ವಿದ್ಯಮಾನಗಳ ವರದಿ ತರಲು, ರಿಸರ್ಚ್ ಆ್ಯಾಂಡ್ ಅನಾಲಿಸಿಸ್ ವಿಂಗೊಂದು ಅಸ್ತಿತ್ವಕ್ಕೆ ಬಂತು! ಸಿಐಎ ಮತ್ತು ರಾ ಎರಡೂ ಸಹ ಒಟ್ಟಾಗಿ ಕೆಲಸ ಮಾಡುವಂತೆ ಆಜ್ಞೆಯಾಯಿತು! ಆರ್ ಎನ್ ಕಾವೋ, ಸಂಸ್ಥಾಪಕ ಅದ್ಯಕ್ಷರಾದ ಸಮಯದಲ್ಲಿ RAW ಎಂಬ ಗೂಢಾಚಾರ ಸಂಸ್ಥೆಯೊಂದು ಆಂತರಿಕವಾಗಿ ಯುದ್ಧಕ್ಕಿಳಿದಿತ್ತು!

RAW ಗೆ ನೇರ ನೇಮಕಾತಿ ಇರುವುದಿಲ್ಲ! ರಹಸ್ಯವಾಗಿ ಕ್ರಿಯಾತ್ಮಕ ಏಜೆಂಟಿ ಗಳಿಗಾಗಿ ಹುಡುಕಾಡ ತೊಡಗಿತ್ತು ಸಂಸ್ಥೆ! ಆಗ ಸಿಕ್ಕವರೇ ರವೀಂದ್ರ ಕೌಶಿಕ್ ಎಂಬ ಅಪ್ಪಟ ವೇಷಧಾರಿ! ನಾಟಕದಲ್ಲಿ ಎಂತಹವರನ್ನೂ ಮೀರಿಸಬಲ್ಲಂತಿದ್ದ ಯುವಕನ ಹೃದಯದಲ್ಲಿದ್ದ ಧೀರತನ ಅಧಿಕಾರಿಗಳನ್ನು ಆಕರ್ಷಿಸಿತ್ತು! ಆತನ ಬಗ್ಗೆ ಕೂಲಕಂಷವಾಗಿ ವಿಚಾರಣೆ ನಡೆಸಿದ ಮೇಲೆ, ವಿಧ ವಿಧವಾಗಿ ಆತನನ್ನು ಹಿಂಬಾಲಿಸಿದ ಮೇಲೆ, ಸಂಸ್ಥೆ ತಮ್ಮ ‘ರಹಸ್ಯ ಕಾರ್ಯಾಚರಣೆ’ ಗೆ ಈತನೇ ಅದ್ಭುತ ವ್ಯಕ್ತಿ ಎಂದು ತೀರ್ಮಾನಿಸಿಬಿಟ್ಟಿತ್ತು!!

ರವೀಂದ್ರ ಕೌಶಿಕ್ 20 ವರ್ಷದೊಳಗೇ ಭಾರತೀಯ ಗುಪ್ತಚರ ಇಲಾಖೆಯಲ್ಲಿ ಸೇರ್ಪಡೆಯಾಗಿ ತದನಂತರ ‘ಗೂಢಚಾರ’ನಾಗಲು ತರಬೇತಿ ಪಡೆದಿದ್ದ ಆತ, ಕೊನೆಗೆ ‘ರಿಸರ್ಚ್ & ಅನಾಲಿಸಿಸ್ ವಿಂಗ್’ ನಲ್ಲಿ ರಹಸ್ಯ ಕಾರ್ಯಕರ್ತನಾಗಿ ಸೇರಿಕೊಂಡ ಆತನಿಗೆ ಕೇವಲ 23 ವರ್ಷ! ಆತನ ಮೊದಲನೇ
ಗುರಿ ‘ಪಾಕಿಸ್ಥಾನವನ್ನು ಸೇರುವುದು, ಹಾಗೂ ಅಲ್ಲಿಂದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ರವಾನಿಸುವುದು!’ ಆತ, ಅದಕ್ಕೋಸ್ಕರವೇ ಉರ್ದು
ಮಾತನಾಡುವುದನ್ನು ಕಲಿತಿದ್ದ! ಮುಸಲ್ಮಾನ ಸಂಸ್ಕೃತಿಗಳನ್ನು, ಆಚರಣೆಗಳನ್ನೆಲ್ಲ ಅಭ್ಯಾಸ ಮಾಡಿಕೊಂಡಿದ್ದ ಈತನಿಗೆ ಕುರಾನ್ ಕೂಡ ಕರಗತವಾಗಿತ್ತು! 1975 ರಲ್ಲಿ ಪಾಕಿಸ್ಥಾನಕ್ಕೆ ಕಳುಹಿಸಿದ ಈತನ ಭಾರತೀಯ ಅಸ್ತಿತ್ವದ ಕುರುಹೂ ಇಲ್ಲದಂತೆ ಅಳಿಸಿ ಹಾಕಿತು ಗುಪ್ತಚರ ಸಂಸ್ಥೆ! ರವೀಂದ್ರ ಕೌಶಿಕ್ ಎನ್ನುವ ವ್ಯಕ್ತಿ ಭಾರತದಲ್ಲಿದ್ದ ಎಂಬುದೂ ಗೊತ್ತಾಗದಷ್ಟು ಎಚ್ಚರ ವಹಿಸಿತು ಸಂಸ್ಥೆ!

ಆತನ ಬದುಕು ಪಾಕಿಸ್ಥಾನದಲ್ಲಿ ಶುರುವಾಗಿದ್ದು ‘ನಬಿ ಅಹ್ಮದ್ ಶಕೀರ್’ ಎಂಬ ಹೆಸರಿನಿಂದ! ಕಾಲಿಟ್ಟ ಮರುದಿನವೇ ಆತ ಕರಾಚಿ ವಿಶ್ವ ವಿದ್ಯಾನಿಲಯದಲ್ಲಿ ‘ಕಾನೂನು’ ವಿದ್ಯಾರ್ಥಿಯಾಗಿ ಸೇರಿಕೊಂಡ! ಆತನಿಗೆ ‘ಪಾಕಿಸ್ಥಾನ’ ವಿಶ್ವ ವಿದ್ಯಾನಿಲಯದಿಂದ ಪ್ರಮಾಣ ಪತ್ರವಿದ್ದರೆ ಮಾತ್ರ ಅಲ್ಲಿನ ಸೇನೆಗೆ ಸೇರಬಹುದೆಂಬ ಅರಿವಿದ್ದರಿಂದ, ಅಭ್ಯಾಸವನ್ನೂ ಮುಗಿಸಿ, ಒಂದೇ ಸಲಕ್ಕೆ ಅಲ್ಲಿನ ಸೇನಾ ಪರೀಕ್ಷೆಯನ್ನೂ ಮುಗಿಸಿ ಸೇನೆಗೆ ಸೇರಿದ ಈತ ‘ಮೇಜರ್’ ಆಗಿ ಬಡತಿ ತೆಗೆದುಕೊಂಡುಬಿಟ್ಟ!!!

1979 ರಿಂದ 1983 ರ ವರೆಗೆ ಆತ ಪಾಕಿಸ್ಥಾನದಿಂದ ಕಳುಹಿಸಿದ್ದ ಮಾಹಿತಿಗಳೆಲ್ಲ ಸ್ಫೋಟಕವಾಗಿತ್ತು! ತೀರಾ ಕ್ಲಿಷ್ಟಕರವಾದ ಮಾಹಿತಿಯನ್ನೂ ಕಲೆಹಾಕಿದ್ದ ಈತನಿಗೆ ಸ್ವತಃ ಇಂದಿರಾ ಗಾಂಧಿಯೇ ‘ದ ಬ‌್ಲ್ಯಾಕ್ ಟೈಗರ್ – ಕಪ್ಪು ಹುಲಿ’ ಎಂಬ ಬಿರುದು ಕೊಟ್ಟಿದ್ದಳು!!! ಗುಪ್ತಚರ ಇಲಾಖೆಗಂತೂ ಈತನ ಮೇಲಿದ್ದ ಭರವಸೆ ಅಷ್ಟಿಷ್ಟಲ್ಲ! ಈತನ ಮಾಹಿತಿಗಳು, ದೇಶದೊಳಗಿದ್ದ ಪಾಕಿಸ್ಥಾನಿ ಬೆಂಬಲಿತ ರಾಜಕಾರಣಿಗಳ ಪಟ್ಟಿ ದೊರಕಿಸಿತು! ಪ್ರತ್ಯೇಕತಾವಾದಿಗಳ ಬೆಂಬಲ, ಹಣಕಾಸು, ಉಗ್ರ ಬೆಂಬಲ, ಕಾಶ್ಮೀರದ ಸಮಸ್ಯೆಗಳ ಹಿಂದಿರುವ ರೂವಾರಿಗಳೆಲ್ಲ ಗುಪ್ತಚರ ಇಲಾಖೆಗೆ ದೊರಕಿತ್ತು!!

Image result for ravindra kaushik

ಈ ಸಮಯಗಳಲೇ ಆತ ‘ಅಮಾನತ್’ ಎನ್ನುವ ಪಾಕಿಸ್ಥಾನಿ ಹುಡುಗಿಯನ್ನು ಪ್ರೀತಿಸಿ ಮದುವೆಯೂ ಆದ ಆತನಿಗೊಂದು ಮುದ್ದು ಗಂಡು ಮಗುವಿತ್ತು!!!

1983 ರಲ್ಲಿ, ಇನ್ಯಾತ್ ಮಸೀಹಾ ಎಂಬ ಇನ್ನೊಬ್ಬ ಗೂಢಚಾರರನ್ನು ಪಾಕಿಸ್ಥಾನಕ್ಕೆ ಕಳುಹಿಸುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು! ನಬೀ ಅಹ್ಮದ್
ನಿಂದ ಒಂದಷ್ಟು ಮಾಹಿತಿ ಕಲೆ ಹಾಕಲು ಈತ ಪಾಕಿಸ್ಥಾನಕ್ಕೆ ಕಾಲಿಟ್ಟಿದ್ದನಷ್ಟೇ! ಆದರೆ, ಆತನ ಅನುಮಾನಾಸ್ಪದ ನಡುವಳಿಕೆಯಿಂದಾಗಿ ಬಂಧಿಸಲ್ಪಟ್ಟ ಆತನಿಂದ ರವೀಂದ್ರ ಕೌಶಿಕ್ ಕೂಡ ದೊರಕಿಬಿಟ್ಟ!! ತದನಂತರ, ಸತತ ಎರಡು ವರ್ಷ ಆತನ ನಿಜವಾದ ಅಸ್ತಿತ್ವವನ್ನು ಬಯಲು ಮಾಡುವಂತೆ ಹಿಂಸಿಸಲಾದರೂ, ಆತ ತಾನ್ಯಾರು, ತನ್ನ ಕೆಲಸವೇನು, ಭಾರತೀಯ ಗುಪ್ತಚರ ಇಲಾಖೆಯ ಬ‌ಗ್ಗೆಯಾಗಲೀ ತುಟಿ ಬಿಚ್ಚಲೇ ಇಲ್ಲ! ಅವನ ಹಠಕ್ಕೆ ಸೋತ ಪಾಕಿಸ್ಥಾನ ಯಾವ ಮಾಹಿತಿಯನ್ನೂ ಕಲೆ ಹಾಕಲಾಗದೇ, 1985 ರಲ್ಲಿ ಆತನನ್ನು ಗಲ್ಲಿಗೇರಿಸುವ ಶಿಕ್ಷೆ ನೀಡಿತು! ಆದರೆ, ಮಧ್ಯ ಬಂದ ಉಚ್ಛ ನ್ಯಾಯಾಲಯ ‘ಜೀವಾವಧಿ ಶಿಕ್ಷೆ’ಯನ್ನು ವಿಧಿಸಿತು!

ನಂತರ 16 ವರ್ಷಗಳು, ಆತ ಮಿಯಾನ್ ವಾಲಿ ಹಾಗೂ ಸಿಯಾಲ್ ಕೋಟ್ ಜೈಲುಗಳಲ್ಲೇ ದಿನ ಕಳೆದವನನ್ನು ಅಷ್ಟೂ ವರ್ಷವೂ ಬರ್ಬರವಾಗಿ ಹಿಂಸಿಸಲಾಗಿತ್ತು! ತೀರಾ ಅನಾರೋಗ್ಯದಿಂದ ಬಳಲಿದ ಈತನಿಗೆ ಕೊನೆಗೆ ಅಸ್ತಮಾ ಹಾಗೂ ಕ್ಷಯ ರೋಗ ತಗುಲಿತು! ಸರಿಯಾದ ವೈದ್ಯಕೀಯ ಸಹಾಯವಿಲ್ಲದೇ ತೀರಾ ಅಸ್ವಸ್ಥಗೊಂಡ ಈತನಿಗೆ ಹೃದಯದ ಖಾಯಿಲೆಯೂ ಇತ್ತೆಂದರೆ, ನಿಮಗೆ ಪಾಕಿಸ್ಥಾನಿ ಸೇನೆ ಕೊಟ್ಟ ಹಿಂಸೆಯ ಬಗ್ಗೆ ಕಲ್ಪನೆಯೂ ಸಿಗಲಾರದು!

ನ್ಯೂ ಸೆಂಟ್ರಲ್ ಮುಲ್ತಾನ್ ಜೈಲಿನಲ್ಲಿದ್ದಾಗ ಈತನ ಕಾಯಿಲೆ ಇನ್ನೂ ಉಲ್ಬಣವಾಯಿತು! ಆದರೆ, ಅದರಿಂದ ಗುಣಮುಖನಾಗಲಾರದೇ 2001’ರಲ್ಲಿ ಕೊನೆಯುಸಿರೆಳೆದ!

ಇಷ್ಟೆಲ್ಲ ಆಗುವಾಗ, ಕೌಶಿಕ್ ರ ಪತ್ನಿ ಮತ್ತು ಮಗನನ್ನೂ ಕೊಲ್ಲಲಾಯಿತು! ಹೆತ್ತವರನ್ನಾಗಲಿ, ಒಡ ಹುಟ್ಟಿದವರನ್ನಾಗಲಿ, ಕುಟುಂಬವನ್ನಾಗಲಿ, ಕೊನೆಗೂ ಭೇಟಿಯಾಗಲೇ ಇಲ್ಲ ಕೌಶಿಕ್! ಅತ್ತ, ಹೆತ್ತ ತಾಯಿಗೆ ವಿಷಯ ತಿಳಿಸಲಾಗಿತ್ತಷ್ಟೇ! ಎಲ್ಲದಕ್ಕಿಂತ ಹೆಚ್ಚಾಗಿ, ಅವರ ಗಮನಾರ್ಹ ಸಾಧನೆಗಳಿಗೆ ಯಾವುದೇ ಗೌರವವನ್ನೂ ನೀಡಲು ಅವಕಾಶವೇ
ಸಿಗದಾಯಿತು!!

ಆತನ ಮಹತ್ತರವಾದ ಭಾರತ ದೇಶಕ್ಕೆ ಮಾಡಿದ ತ್ಯಾಗ ಇವತ್ತೂ ಸಹಸ್ರ ಗೂಢಚಾರಿಗಳಿಗೆ ಪ್ರೇರಣೆಯಾಗಿದೆ ಗೊತ್ತೇ? ಇವತ್ತೂ ಆತನನ್ನು ನೆನಪಿಸಿ ಕೊಳ್ಳುವುದು ‘ಕಪ್ಪು ಹುಲಿ’ ಎಂದೇ! ಆತ ಜೈಲಿನಲ್ಲಿದ್ದಾಗ ಬರೆದ ಆತನ ಅನುಭವಗಳು, ನೆನಪುಗಳು, ಪತ್ರಗಳಲ್ಲೆಲ್ಲ ಆತನ ‘ತಾಕತ್ತು’ ಹೊಳೆಯುತ್ತಲಿತ್ತು! ಆತನ ಸಾವಾದ ಮೇಲೆ, ಅದೇ ಸೆಂಟ್ರಲ್ ಜೈಲಿನ ಹಿಂಭಾಗದಲ್ಲಿ ಆತನನ್ನು ಹೂಳಲಾಯ್ತು! ಆತ, ಕೊನೆಗೂ ತಾಯ್ನಾಡಿಗೆ ಮರಳಲೇ ಇಲ್ಲ!

ಇವತ್ತೂ ಕೂಡ, ಆತ ಕಲೆ ಹಾಕಿದ ಮಾಹಿತಿಗಳು ಅದೆಷ್ಟೋ ಉಪಯುಕ್ತವಾಗುತ್ತಲೇ ಇದೆಯೆಂದರೆ ಆತನನ್ನು ಭಾರತದ ಶ್ರೇಷ್ಠ ಗೂಢಚಾರ ನೆಂದೇ ನೆನಪಿಸಿಕೊಳ್ಳುತ್ತದೆ ಸಂಸ್ಥೆ!!

ಆತನಿಗೊಂದು ಸಲಾಮ್!!!


postcard team

Tags

Related Articles

FOR DAILY ALERTS
Close