ಅಂಕಣ

ಹೊಲದಲ್ಲಿ ಮೂಡಿದ ಸ್ವಸ್ತಿಕ್ ಚಿಹ್ನೆ ನೋಡಿ ದಂಗಾದ ರೈತ!!! ಇಲ್ಲಿದೆ ವಿಸ್ಮಯಕಾರಿ ಘಟನೆಯ ಚಿತ್ರಣ!!

ಧನಾತ್ಮಕ ಮತ್ತು ಋಣಾತ್ಮಕ ಎನರ್ಜಿಗಳು ಮನೆಯೊಳಗೆ ಬರುವುದಕ್ಕಾಗಿ ಹಿಂದೂಗಳು ಮನೆಯ ಮುಖ್ಯದ್ವಾರದ ಬಳಿ ಸ್ವಸ್ತಿಕ ಚಿಹ್ನೆಯನ್ನು ಬರೆಯುವುದು ಗೊತ್ತೇ ಇದೆ. ಅಷ್ಟೇ ಅಲ್ಲದೇ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸೇರಿಕೊಳ್ಳುತ್ತದೆ ಎನ್ನುವುದು ಹಿಂದೂಗಳ ನಂಬಿಕೆ. ಆದರೆ ವಿಲ್ಟ್ಶೈರ್ನ ಆವೆರಿ ಬಳಿಯ ಬೆಕ್ಹ್ಯಾಂಪ್ಟನ್ನ ಪ್ರದೇಶದಲ್ಲಿ ರೈತ ಬೆಳೆದ ಪೈರಿನಲ್ಲಿ ಏಕಾಏಕಿಯಾಗಿ ಸ್ವಸ್ತಿಕ ಚಿಹ್ನೆಯನ್ನು ಬರೆಯಲಾಗಿರುವುದು ಕುತೂಹಲವನ್ನು ಮೂಡಿಸಿದೆ!!

ಆದರೆ, ಶಾಂತಿ ಹಾಗೂ ನಿರಂತರತೆಗೆ ಸಂಬಂಧಿಸಿದ ಭಾರತೀಯ ಚಿಹ್ನೆಯಾದ “ಸ್ವಸ್ತಿಕ”ವು ಆರ್ಯನ್ನರು ಹಾಗೂ ಸಿಂಧು ನಾಗರಿಕತೆಗಿಂತಲೂ ತೀರಾ ಹಳೆಯದು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಸ್ವಸ್ತಿಕ ಚಿಹ್ನೆ ಕನಿಷ್ಠ 11 ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ಪಾಶ್ಚಾತ್ಯ ಹಾಗೂ ಮಧ್ಯಪೂರ್ವ ನಾಗರಿಕತೆಗಳಲ್ಲೂ ಪಸರಿಸಿಕೊಂಡಿತ್ತು ಎಂಬುದನ್ನು ದೇಶದ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಆದರೆ, ಸ್ವಸ್ತಿಕ ಆಕಾರದಲ್ಲಿರುವ ಭಾರಿಗಾತ್ರದ ಬೆಳೆಯ ವೃತ್ತವನ್ನು ವಿಲ್ಟ್ಶೈರ್ ಗ್ರಾಮಾಂತರದಲ್ಲಿ ಗುರುತಿಸಲಾಗಿದೆ. ವಿಲ್ಟ್ಶೈರ್ನ ಆವೆರಿ ಬಳಿಯ ಬೆಕ್ಹ್ಯಾಂಪ್ಟನ್ನ ಪ್ರದೇಶದಲ್ಲಿ ಬೃಹದಾಕಾರವಾಗಿ ಕತ್ತರಿಸಲ್ಪಟ್ಟ ಸ್ವಸ್ತಿಕ್ ಚಿಹ್ನೆಯು ಕಂಡು ಬಂದಿದ್ದು, ಇದು ಸರಿಸುಮಾರು 150 ರಿಂದ 180 ಅಡಿ ಅಗಲವಿದೆ!! ಇದರ ರಚನೆಯು ಬಹು ದೊಡ್ಡದಾಗಿದೆಯಲ್ಲದೇ, ರೈತನು ಬೆಳೆದ ಈ ಬೆಳೆಯಲ್ಲಿ ಆತನ ಅನುಮತಿಯೇ ಇಲ್ಲದೇ ಈ ರೀತಿಯಾಗಿ ಚಿಹ್ನೆಯನ್ನು ಮಾಡಲಾಗಿರುವುದೇ ವಿಪರ್ಯಾಸ!!

ಮೊದಲಿಗೆ ಈ ರೀತಿಯ ಚಿಹ್ನೆಯನ್ನು ಕಂಡಾಗ ಆಘಾತಕ್ಕೊಳಗಾದ ರೈತನು ತದನಂತರದಲ್ಲಿ ವಾಸ್ತವ ಸತ್ಯವನ್ನು ತಿಳಿದುಕೊಂಡನಲ್ಲದೇ, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಕೊಂಡನು. ಅದೇನೆಂದರೆ, ಬೆಳೆಯನ್ನು ಈ ರೀತಿಯಾಗಿ ಕತ್ತರಿಸಿರುವ ಚಿಹ್ನೆಯ ಮೂಲವು ಹಿಂದೂ ಧರ್ಮದ ಧನಾತ್ಮಕತೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೇ, ಬಹಳ ಪುರಾತನವಾದ ‘ಸ್ವಸ್ತಿಕ’ ಚಿಹ್ನೆಯನ್ನು ನಾಝಿ ಪಕ್ಷವು ತಮ್ಮ ಕುಖ್ಯಾತ ಸೈನ್ಯಕ್ಕಾಗಿ ಈ ‘ಸ್ವಸ್ತಿಕ್’ ಚಿಹ್ನೆಯನ್ನು ಅಳವಡಿಸಿಕೊಂಡಿತ್ತು ಎನ್ನುವುದನ್ನು ಆತನಿಗೆ ತಿಳಿಸಲಾಯಿತು.

ಹಿಂದೂ ಧರ್ಮದ ಪ್ರಕಾರ, “ಸ್ವಸ್ತಿಕ ಚಿಹ್ನೆ”ಯ ನಾಲ್ಕು ಬಾಹುಗಳು 90 ಡಿಗ್ರಿಗಳಲ್ಲಿ ಬಾಗಿದೆ, ಸಾಮಾನ್ಯವಾಗಿ ಒಂದು ಸಮಬಾಹು ಕ್ರಾಸ್ ಆಕಾರದ ರೂಪವನ್ನು ತೆಗೆದುಕೊಳ್ಳುವ ಒಂದು ಸಂಕೇತವಾಗಿದೆ. ಇನ್ನು ಈ ಸ್ವಸ್ತಿಕ ಆಕಾರದ ಆಭರಣಗಳ ಅತ್ಯಂತ ಮುಂಚಿನ ಪುರಾತತ್ವ ಪುರಾವೆಗಳು ಸಿಂಧೂ ಕಣಿವೆಯ ನಾಗರಿಕತೆ, ಮತ್ತು ಜೊತೆಗೆ ಮೆಡಿಟರೇನಿಯನ್ ಶಾಸ್ತ್ರೀಯ ಪ್ರಾಚೀನತೆ ಹಾಗು ಪ್ರಾಚೀನಶಿಲಾಯುಗದ ಯೂರೋಪ್‍ನ ಕಾಲಮಾನದ್ದೆಂದು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೇ, ಟರ್ಕಿಕ್, ಭಾರತ, ಇರಾನ್, ನೇಪಾಳ, ಚೀನಾ, ಜಪಾನ್, ಕೊರಿಯಾ ಮತ್ತು ಯೂರೋಪ್ ಅನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ವಿವಿಧ ಇತರ ಪ್ರಾಚೀನ ನಾಗರಿಕತೆಗಳಲ್ಲೂ ಸ್ವಸ್ತಿಕಗಳನ್ನು ಬಳಸಲಾಗಿದೆ. ಆದರೆ ಒಬ್ಬ ರೈತನ ಬೆಳೆಯಲ್ಲಿ ಆತನಿಗೆ ಗೊತ್ತಿಲ್ಲದಂತೆಯೇ ಅದ್ಭುತವಾದ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿರುವುದೇ ವಿಶೇಷವಾಗಿದೆ!!

ಪ್ರಾಚೀನ ರಹಸ್ಯಗಳ ಲೇಖಕನಾಗಿರುವ ಹಗ್ ನ್ಯೂಮನ್, ತನ್ನ ಡ್ರೋನ್ ಮೂಲಕ ಈ ಬೃಹತ್ ರಚನೆಯ ತುಣುಕನ್ನು ಪಡೆದುಕೊಂಡಿದ್ದಲ್ಲದೇ, ಬೆಳೆಯ ಮಧ್ಯದಲ್ಲಿ ಬಿಡಿಸಲಾಗಿದ್ದ ಈ ಸಂಕೇತವನ್ನು ಫೇಸ್ಬುಕ್ ನಲ್ಲಿ ಪೆÇೀಸ್ಟ್ ಮಾಡಿದ್ದಾನೆ.

Image result for swastika appeared crop circle cooks plantation near beckhampton wiltshire uk

ವಿಲ್ಟ್ಶೈರ್ನಲ್ಲಿ ವಾಸಿಸುವ 43 ವರ್ಷದವನಾದ ಈತ ಹೀಗೆ ಹೇಳುತ್ತಾನೆ: ‘ನಾನು ಆ ಚಿಹ್ನೆಯನ್ನು ಪರೀಕ್ಷಿಸಲು ಅಲ್ಲಿಗೆ ಧಾವಿಸಿದ ಸಂದರ್ಭದಲ್ಲಿ, ಆ ರೈತರನ್ನು ಭೇಟಿ ಮಾಡಿದ್ದೇನೆ. ಅಷ್ಟೇ ಅಲ್ಲದೇ ಆ ಕ್ಷೇತ್ರಕ್ಕೆ ಬೇಟಿ ನೀಡಲು ಬಹಳ ಉತ್ಸುಕರಾಗಿದ್ದೆ ಆದರೆ ಆತ ತನಗೆ ಅನುಮತಿಯನ್ನೇ ನೀಡಲಿಲ್ಲ!! ಹಾಗಾಗಿ ರೈತ ಬೆಳೆದ ಬೆಳೆಯಲ್ಲಿ ಕತ್ತರಿಸಲಾಗದ ಚಿಹ್ನೆಯ ಮೇಲೆ ನನ್ನ ಡ್ರೋನ್ ಅನ್ನು ಹಾರಿಸಿ ಕೆಲವು ಉತ್ತಮ ಚಿತ್ರಗಳನ್ನು ಪಡೆದುಕೊಂಡಿದ್ದೇನೆ’ ಎಂದು ಹೇಳುತ್ತಾನೆ.

‘ಆದರೆ ಆತ ನನಗೆ ಈ ಬಗ್ಗೆ ಹೆಚ್ಚು ಮಾಹಿತಿಯನ್ನು ಹೇಳಲೇ ಇಲ್ಲ!! ಯಾಕೆಂದರೆ ಆ ರೈತ ಈ ಚಿಹ್ನೆಯ ಬಗ್ಗೆ ತಿಳಿದುಕೊಳ್ಳದೇ ಇದ್ದು, ಇದರ ಬಗ್ಗೆ ನಕಾರಾತ್ಮಕವಾದ ಅರ್ಥನ್ನು ಕಲ್ಪಿಸಿಕೊಂಡಿದ್ದ. ತದನಂತರದಲ್ಲಿ ಆತ ಈ ಚಿಹ್ನೆಯ ಬಗ್ಗೆ ತಿಳಿದುಕೊಂಡಾಗ ಆತನಲ್ಲಿ ಈ ಚಿಹ್ನೆಯ ಬಗ್ಗೆ ಸ್ವಲ್ಪ ಕಾಳಜಿ ಮೂಡಿತಲ್ಲದೇ, ಅದರ ಬಗ್ಗೆ ವಿಶ್ವಾಸ ಹೊಂದಿರುವುದು ಕಂಡು ಬಂದಿದೆ’ ಎಂದು ಹಗ್ ಹೇಳುತ್ತಾರೆ!!

‘ಈ ಪುರಾತನವಾದ ಚಿಹ್ನೆಯು ಧನಾತ್ಮಕವಾಗಿದೆ. ಅಷ್ಟೇ ಅಲ್ಲದೇ, ಈ ಚಿಹ್ನೆಯನ್ನು ಸಾವಿರ ವರ್ಷಗಳಿಂದ ಬುದ್ಧನ ಪ್ರತಿಮೆಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಇದನ್ನು ಬಳಸಲಾಗಿದೆ’ ಎಂದು ಆತ ಹೇಳಿದ್ದಾರೆ!!

ಸ್ವಸ್ತಿಕವು ವ್ಯಾಪಕವಾದ ಇತಿಹಾಸವನ್ನು ಹೊಂದಿದ್ದು, ಅಡಾಲ್ಫ್ ಹಿಟ್ಲರ್ ಸ್ವಸ್ತಿಕ ಚಿಹ್ನೆಯನ್ನು ನಾಝಿಯ ಚಿಹ್ನೆಯಾಗಿ ಬಳಸಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಕನಿಷ್ಠ 5,000 ವರ್ಷಗಳ ಹಿಂದೆಯೇ ಈ ಚಿಹ್ನೆಯನ್ನು ಬಳಸಲಾಗುತ್ತಿತ್ತು. ಆದರೆ, ಇದರಲ್ಲಿರುವ ವ್ಯತ್ಯಾಸ ಏನೆಂದರೆ, ಪ್ರಾಚೀನ ಚಿಹ್ನೆಯು ರೇಖೆಗಳ ನಡುವಿನ ಅಂತರಗಳಲ್ಲಿ ಚುಕ್ಕೆಗಳನ್ನು ಹೊಂದಿದೆ. ಆದರೆ ನಾಝಿ ಧ್ವಜದಲ್ಲಿ ಬಳಸಲಾದ ಚಿಹ್ನೆಯಲ್ಲಿ ಮೊಂಡಾದ ತುದಿಗಳ ಬದಲು ಸುತ್ತಿನ ಅಂಚುಗಳನ್ನು ಹೊಂದಿದೆ ಎಂದು ಹೇಳುತ್ತಾರೆ.

 

ಹಗ್ ಹೇಳುವ ಪ್ರಕಾರ, “ಇವುಗಳನ್ನು ಹೋಕ್ಸ್ನ ತಂಡಗಳು, ತಮಾಷೆಗಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದು, ಯಾರ ಅನುಮತಿಯಿಲ್ಲದೆಯೇ ಬೆಳೆಯಲ್ಲಿ ವೃತ್ತಾಕಾರವಾದ ಚಿಹ್ನೆಗಳನ್ನು ಮಾಡುತ್ತಿರುವುದೇ ಇವರ ಹವ್ಯಾಸ!! ಆದರೆ ಅವರು ಯಾರು ಎನ್ನುವುದೇ ರಹಸ್ಯವಾಗಿದೆ. ಆದರೆ ಆ ತಂಡ ಸಿಕ್ಕಿಬಿದ್ದರೆ ಅವರ ಮೇಲೆ ವಿಚಾರಣೆ ನಡೆಸಲಾಗುತ್ತದೆ”

ಅಷ್ಟೇ ಅಲ್ಲದೇ, ಈ ತಂಡಗಳು ಬೆಳೆದು ನಿಂತ ಬೆಳೆಯಲ್ಲಿ ವೃತ್ತವನ್ನು ಅಥವಾ ಬೆಳೆ ರಚನೆಯನ್ನು ಮಾಡಲು, ಸ್ಟ್ರಿಂಗ್ ಮತ್ತು ಮರದ ಹಲಗೆಗಳನ್ನು ಬಳಸಿಕೊಂಡು ರಚಿಸಲಾದ ಒಂದು ಮಾದರಿಯಾಗಿದೆ, ಹಾಗಾಗಿ ಇದು ಬೆಳೆಯನ್ನು ಕತ್ತರಿಸಿ ಮತ್ತು ಬಾಗಿಸಿ ಮಾಡುವಂತಹ ಕಲೆಯಾಗಿದೆ ಎಂದು ಹೇಳಿದ್ದಾರೆ.

ಆದರೆ ಅವರು ಕತ್ತರಿಸಿರುವ ಚಿತ್ರಣಗಳು ಅತ್ಯಾಧುನಿಕ ಮತ್ತು ಅತ್ಯದ್ಭುತವಾದ ಕಲೆಯಾಗಿರುವುದಂತೂ ಅಕ್ಷರಶಃ ನಿಜ!! ಅಷ್ಟೇ ಅಲ್ಲದೇ ಈ ಭೂ ಕಲೆಯನ್ನು ಮಾಡುವುದು ಕೂಡ ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಇದೊಂದು ಕಷ್ಟಕರವಾದಂತಹ ಕಲೆಯಾಗಿದ್ದಲ್ಲದೇ ಬಹಳ ಸುಂದರವಾದ ಕಲೆಯೂ ಆಗಿದೆ.

Source :http://www.sanskritimagazine.com/indian-religions/hinduism/vedic-swastika-appeared-crop-circle-cooks-plantation-nr-beckhampton-wiltshire-uk/

Tags

Related Articles

Close