ಅಂಕಣ

ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆಂಬ ಕಾರಣಕ್ಕೆ ಇಫ್ತಾರ್ ಕೂಟದಿಂದ ಪ್ರಣವ್ ಮುಖರ್ಜಿ ಅವರನ್ನು ಹೊರಗಿಟ್ಟು ತನ್ನ ಪಕ್ಷದ ಸರ್ವನಾಶಕ್ಕೆ ಮುನ್ನುಡಿ ಬರೆದ ರಾಹುಲ್ ಗಾಂಧಿ

ಕಾಂಗ್ರೆಸಿನ ‘ಟ್ರಬಲ್ ಶೂಟರ್’ ಎಂದೆ ಖ್ಯಾತಿವೆತ್ತವರು ಪ್ರಣಬ್ ಮುಖರ್ಜಿ. ಇವತ್ತು ಕಾಂಗ್ರೆಸ್ ದೇಶದಲ್ಲಿ ಇನ್ನೂ ಇದೆ ಅಂದರೆ ಅದಕ್ಕೆ ಕಾರಣ ಪ್ರಣಬ್ ದಾ ಅವರ ಬುದ್ದಿ ಮತ್ತೆ. ಕಾಂಗ್ರೆಸಿನ ಕಷ್ಟಕಾಲದಲ್ಲಿ ತನ್ನ ಪಕ್ಷದ ಬೆನ್ನುಲುಬಾಗಿ ನಿಂತು ಪಕ್ಷ ಮಣ್ಣು ಮುಕ್ಕದಂತೆ ಮಾಡಿದವರೆ ಪ್ರಣಬ್ ದಾ. ಇಂದಿರಾ ಕಾಲದಿಂದಲೂ ಪಕ್ಷಕ್ಕೆ ನಿಷ್ಠರಾಗಿ ದುಡಿದವರು ಪ್ರಣಬ್. ಗಾಂಧಿ ಪರಿವಾರ ಒಂದಲ್ಲ, ಎರಡಲ್ಲ ಸತತ ನಾಲ್ಕು ಬಾರಿ ತನ್ನ ಬೆನ್ನಿಗೆ ಚೂರಿ ಇರಿದರೂ ತನ್ನ ಪಕ್ಷ ನಿಷ್ಠೆಯನ್ನು ಯಾವತ್ತೂ ಬಿಟ್ಟಿಲ್ಲ ದಾದಾ.

ಎಲ್ಲಿವರೆಗೆಂದರೆ ಮೊನ್ನೆ ಆರ್.ಎಸ್.ಎಸ್ ಕಾರ್ಯಕ್ರಮದಲ್ಲೂ ಅವರು ತಮ್ಮ ಪಕ್ಷದ ಭಾವನೆಗಳಿಗೆ ನೋವಾಗದಂತೆ ಅತ್ಯಂತ ಪ್ರಬುದ್ದರಾಗಿ ಭಾಷಣ ಮಾಡಿದ್ದರು. ತನ್ನ ಪಕ್ಷದ ಹಿರಿಯ ನಾಯಕ ನೆಹರೂರವನ್ನೂ ಉಲ್ಲೇಖಿಸಿ ಪಕ್ಷದ ಬಗ್ಗೆ ತಮ್ಮ ನಿಷ್ಠೆಯನ್ನು ಜಗಜ್ಜಾಹೀರು ಮಾಡಿದ್ದರು. ಆದರೆ ಅತ್ಯಂತ ಅಪ್ರಬುದ್ದ ಮಂದ ಬುದ್ದಿ ರಾಹುಲ್ ಗೆ ಮಾತ್ರ ಇದು ಅರ್ಥವಾಗಿಲ್ಲ. ತನ್ನ ಪಕ್ಷದ ಉದ್ದಾರಕ್ಕಾಗಿ ತನ್ನ ಇಡಿಯ ಜೀವನವನ್ನೇ ತೇಯ್ದ ಕಾಂಗ್ರೆಸಿನ ಅತ್ಯಂತ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಅಪಮಾನಮಾಡಲೆಂದೆ ಈಗ ಅವರನ್ನು ತನ್ನ ಇಫ್ತಾರ್ ಕೂಟದಿಂದ ಹೊರಗಿಟ್ಟಿದ್ದಾರೆ ಕಾಂಗ್ರೆಸಿನ ಶೆಹಜಾದ.

ಪ್ರಣಬ್ ದಾ ಅವರು ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾವಹಿಸುವರು ಎಂದು ತಿಳಿದ ತಕ್ಷಣವೆ ಕಾಂಗ್ರೆಸಿನ ಘಟಾನುಘಟಿ ನಾಯಕರುಗಳೆಲ್ಲ ಪ್ರಣಬ್ ದಾ ಗೆ ಬುದ್ದಿವಾದ ಹೇಳಲು ಶುರುವಿಟ್ಟುಕೊಂಡಿದ್ದರು. ಸ್ವತಃ ದಾದಾ ಅವರ ಪುತ್ರಿ ಶರ್ಮಿಷ್ಠಾ ಇದರ ಪರಿಣಾಮ ನೆಟ್ಟಗಾಗಿರೋದಿಲ್ಲ, ಮಾತುಗಳು ಮರೆತು ಹೋಗುತ್ತವೆ ಆದರೆ ಚಿತ್ರ ಯಾವತ್ತಿಗೂ ಸ್ಮೃತಿಯಲ್ಲಿ ಉಳಿಯುತ್ತದೆ ಎನ್ನುವಂತಹ ಮಾತುಗಳನ್ನೂ ಆಡಿದ್ದರು. ಯಾರ ಧಮಕಿಗೂ ಸೊಪ್ಪು ಹಾಕದ ಪ್ರಣಬ್ ದಾ ಒಬ್ಬ ಪ್ರಬುದ್ದ ರಾಜಕಾರಣಿಯಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ದೇಶಪ್ರೇಮ ಮೆರೆದಿದ್ದರು.

ಪ್ರಣಬ್ ದಾ ಅವರನ್ನು ಮೂಲೆಗುಂಪು ಮಾಡುತ್ತಿರುವುದು ಅವರಿಗೇನೂ ಹೊಸತಲ್ಲ, ರಾಹುಲ್ ತಂದೆ ರಾಜೀವ್ ಗಾಂಧಿಯೂ ಕೂಡಾ ಪ್ರಣಬ್ ದಾ ಅವರನ್ನು ಮೂಲೆಗುಂಪು ಮಾಡಿದ್ದರು. ಇದರಿಂದ ಬೇಸತ್ತಿದ್ದ ದಾದಾ ತಮ್ಮದೆ ಪಕ್ಷವನ್ನೂ ಸ್ಥಾಪಿಸಿದ್ದರೂ ಕೂಡಾ. ದಾದಾನ ನೆರವಿಲ್ಲದೆ ಕಾಂಗ್ರೆಸ್ ಮಣ್ಣು ಮುಕ್ಕುತ್ತದೆ ಎಂದು ಗೊತ್ತಾದ ಕೂಡಲೆ ರಾಜೀವ್ ಅವರು ಪ್ರಣಬ್ ದಾ ಅವರ ಮನವೊಲಿಸಿ ಮತ್ತೆ ವಾಪಾಸು ಕಾಂಗ್ರೆಸಿಗೆ ಕರೆಸಿಕೊಂಡು ಬಂದಿದ್ದರು. ಈಗ ಮಗ ರಾಹುಲ್ ಕೂಡಾ ದಾದಾನನ್ನು ಮೂಲೆಗುಂಪು ಮಾಡಲು ನೋಡುತ್ತಿದ್ದಾರೆ. ಇದರಿಂದ ಪ್ರಣಬ್ ದಾ ಗೆ ಆಗುವ ನಷ್ಟವೇನಿಲ್ಲ, ಆದರೆ ಕಾಂಗ್ರೆಸ್ ಮಾತ್ರ ಸರ್ವನಾಶವಾಗಿ ಹೋಗುತ್ತದೆ. ಸಂದಿಗ್ದ ಪರಿಸ್ಥಿತಿಗಳಿಂದ ಕಾಂಗ್ರೆಸ್ ಅನ್ನು ರಕ್ಷಿಸುವ ತಾಕತ್ತಿರುವ ಏಕೈಕ ವ್ಯಕ್ತಿ ಪ್ರಣಬ್ ದಾ. ರಾಜಕೀಯದಲ್ಲಿ ದಾದಾ ಅವರಿಗಿರುವ ಅನುಭವ, ರಾಹುಲ್ ವಯಸ್ಸಿಗಿಂತಲೂ ಹೆಚ್ಚು ಎನ್ನುವುದನ್ನು ಮಂದಬುದ್ದಿ ಮರೆತಿದ್ದಾರೆ.

ಭಾರತದ ಅತ್ಯಂತ ಪುರಾತನ ಪಕ್ಷವೊಂದು ತನ್ನ ಮಂದಬುದ್ದಿ ನಾಯಕನ ದುರ್ವರ್ತನೆಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಇನ್ನೇನಿದ್ದರೂ ಕಾಂಗ್ರೆಸ್ ಎನ್ನುವ ಪಕ್ಷ ಇತಿಹಾಸದ ಪುಟ ಸೇರುತ್ತದೆ. ದುರ್ಯೋಧನನ ಅಹಂಕಾರ, ಧೃತರಾಷ್ಟ್ರನ ‘ಮೌನ’ ಮತ್ತು ಗಾಂಧಾರಿಯ ‘ಕುರುಡು’ ಪ್ರೇಮ ಇಡಿಯ ಕೌರವರ ಕುಲವನ್ನೆ ಸರ್ವನಾಶ ಮಾಡಿತು. ಪ್ರಣಬ್ ದಾ ಅಂತಹ ಹಿರಿ ಜೀವವನ್ನು ನೋಯಿಸುತ್ತಿರುವ ಕಾಂಗ್ರೆಸ್ ಕೂಡಾ ತನ್ನ ಸರ್ವನಾಶಕ್ಕೆ ಮುನ್ನುಡಿ ಬರೆಯುತ್ತಿದೆ. ಆಗುವುದೆಲ್ಲ ಒಳ್ಳೆಯದಕ್ಕೆ.. ಕಾಂಗ್ರೆಸ್ ಮುಕ್ತ ಭಾರತಕ್ಕೆ ರಾಹುಲನೆ ತನ್ನ ಯೋಗದಾನ ನೀಡುತ್ತಿರುವುದು ಭಾಗ್ಯದ ವಿಡಂಬನೆ ಅಷ್ಟೆ!

-ಶಾರ್ವರಿ

Tags

Related Articles

Close