ಅಂಕಣ

ತಮ್ಮನ್ನು ತಾವು ದೇಶಕ್ಕಾಗಿ ಸಮರ್ಪಿಸಿಕೊಂಡಾಗ ಅವರ ವಯಸ್ಸು ಕೇವಲ 26 ಆಗಿತ್ತು! ಈ ಅಧಿಕಾರಿಯ ಬಗ್ಗೆ ನಿಮಗೆ ಗೊತ್ತೇ?

1999ರಲ್ಲಿ ಪಾಕಿಸ್ತಾನ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿತ್ತು. ಪಾಕಿಸ್ತಾನಿ ಸೇನೆ ಭಯೋತ್ಪಾದಕರ ವೇಶದಲ್ಲಿ ಅತೀ ಮುಖ್ಯ ಗಡಿ ಎನಿಸಿಕೊಂಡಿರುವ ಕಾರ್ಗಿಲ್ ನ್ನು ವಶಪಡಿಸಿಕೊಂಡಿತ್ತು. ಕಾರ್ಗಿಲ್ ಬೆಟ್ಟಗಳು ಅತೀ ಭಯಂಕರ ಬೆಟ್ಟಗಳು. ನಾವು ಪುನಃ ಕಾರ್ಗಿಲ್ ಬೆಟ್ಟವನ್ನು ವಶಕ್ಕೆ ಪಡೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ,ಆದರೂ ಆ ಬೆಟ್ಟಗಳನ್ನು ಮರಳಿ ಪಡೆಯುವುದು ಭಾರತಕ್ಕೆ ಅನಿವಾರ್ಯವಾಗಿತ್ತು, ಈ ಬೆಟ್ಟಗಳನ್ನು ಮರಳಿ ಭಾರತದ ವಶಕ್ಕೆ ತೆಗೆದುಕೊಂಡು, ಆ ಕಾರ್ಗಿಲ್ ವಿಜಯಕ್ಕೆ 527 ಸೈನಿಕರು ಹುತಾತ್ಮರಾದರು.

ಭಾರತ-ಪಾಕ್ ಯುದ್ಧ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಪಾಪಿ ಪಾಕಿಗಳ ‘ಮುಖಭಂಗ’ ಮಾಡಿದ್ದು ಕಾರ್ಗಿಲ್ ಯುದ್ಧದಲ್ಲಿ. ನಮಗೆ ಕಾರ್ಗಿಲ್ ಯುದ್ಧದಲ್ಲಿ ವಿಜಯ ತಂದು ಕೊಟ್ಟ ‘ಕದನಕಲಿಗಳು ಅನೇಕರು. ಅದರಲ್ಲೊಬ್ಬ ಕದನಕಲಿ ಮೇಜರ್ ರಾಜೇಶ್ ಅಧಿಕಾರಿಯ ಬಗ್ಗೆ,

ಮೇಜರ್ ರಾಜೇಶ್ ಸಿಂಗ್ ವಾಯುಸೇನೆಯ ಅಧಿಕಾರಿಯಾಗಿದ್ದರು. ಮೇಜರ್ ರಾಜೇಶ್ ಅಧಿಕಾರಿಯ ನೇತೃತ್ವದಲ್ಲಿ ಹೆಲಿಕಾಪ್ಟರಗಳನ್ನು ತೊಲೊಲಿಂಗ್ ನ ಬಳಿಗೊಯ್ದು ಶತ್ರುಗಳ ಮೇಲೆ ನೇರ ದಾಳಿ ಮಾಡುವ ಯೋಜನೆ ಮಾಡಲಾಗಿತ್ತು. ರಾಜೇಶ್ ಮಾತನಾಡುತ್ತಾ ನನ್ನ ಪಾಲಿಗೆ ಜೂನ್ ಒಳ್ಳೆಯ ತಿಂಗಳು, ನಾವಿಗ ಮೇ ತಿಂಗಳ ಕೊನೆಯಲ್ಲಿದ್ದೆವೆ,ನಾವು ಗೆಲುವಿಗೆ ಬಹಳ ಹತ್ತಿರ ಇದ್ದೇವೆ ಎಂದರು.

ಇಷ್ಟು ಹೇಳಿ ಇನ್ನೆನು ಮುಂದೆ ಹೊರಡಬೇಕು ಅಷ್ಟರಲ್ಲಿ ಅವರಿಗೊಂದು ಪತ್ರ ಬಂತು.ಹತ್ತು ತಿಂಗಳ ಹಿಂದೆ ಕೈ ಹಿಡಿದ ಹೆಂಡತಿಯ ಪತ್ರ ಅದು. ಮದುವೆಯಾಗಿ ಹತ್ತು ತಿಂಗಳು ಕಳೆದಿರದಿದ್ದಾಗ ಹೆಂಡತಿಯ ಪತ್ರ ಬಂದರೆ ಯಾರು ತಾನೆ ಓದದೆ ಇರಲು ಸಾಧ್ಯ ಹೇಳಿ. 26ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ೧೬ ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. ೪೭ ರೈಫಲ್.

ಯುದ್ಧಕ್ಕೆ ಕರೆ ಬಂದಾಗ ತುಂಬು ಗರ್ಭಿಣಿ ಪತ್ನಿಯ ಪತ್ರ ಬಂದರೂ ಓದಿದರೆ ತನ್ನ ಮನ ವಿಚಲಿತಗೊಳ್ಳಬಹುದು ಎಂದುಕೊಂಡು ಕೋಟಿನ ಜೇಬಿನಲ್ಲಿ ಇಟ್ಟುಕೊಂಡು ಹಾಗೆಯೇ ಯುದ್ಧಕ್ಕೆ ಹೋದ.ಅವರಿಗೆ ಹೆಂಡತಿಯ ಪತ್ರಕ್ಕಿಂತಲು ಸಂಕಷ್ಟದಲ್ಲಿರುವ ತಾಯಿ ಭಾರತಿಯ ಇಂಚಿಂಚು ಜಾಗವನ್ನ ಕಾಪಾಡೋದೆ ಮುಖ್ಯವಾಗಿತ್ತು.ಅವರ ಮುಂದಿದ್ದ ಗುರಿ ಪಾಕಿ ಬಂಕರನ್ನ ಚಿತ್ರ ಮಾಡಬೇಕೆಂಬುದೊಂದೆ.

ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ,ಎಲ್ಲರಿಗಿಂತ ಮುಂದಿದ್ದ ಮೇಜರ್ ರಾಜೇಶ್ ಅಧಿಕಾರಿ ಪಾಕಿಗಳ ಬಂಕರ್ ಬಳಿಗೂ ಎಲ್ಲರಿಗಿಂತ ಮುಂಚೆಯೆ ತಲುಪಿದ್ದರು. ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿಪಡೆಯ ಬಂಕರ್ ಈ ದಾಳಿಗೆ ಕುಸಿದುಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು.

ಆದರೆ ಹೃದಯ ಮಾತ್ರ ಇನ್ನು ಗಟ್ಟಿಯಾಗಿತ್ತು . ಆದರೂ ರಕ್ತ ಸೂಕ್ತವಾದ ಇದ್ದ ದೇಹ ನಿಲ್ಲಲಾಗದೆ ತೂರಾಡುತ್ತಿತ್ತು,ಆದರೂ ಧೃತಿಗೆಡದೆ ಶತ್ರುಗಳತ್ತ ಗುರಿ ಇಟ್ಟು ಗುಂಡು ಹಾರಿಸಿದರು,ಶತ್ರು ಪಡೆಯ ಅನೇಕರು ಶವವಾದರು.ಬಂಕರ್ ಛಿದ್ರವಾಯಿತು,ಗುರಿಗೆ ಹತ್ತಿರದಲ್ಲಿದ್ದರು.

ಕೊನೆಗೂ ಭಾರತಮಾತೆಗೆ ಬೆಟ್ಟವನ್ನು ಸಮರ್ಪಿಸಿ ಪ್ರಣಾರ್ಪಣೆ ಗೈದಿದ್ದರು. ಪತ್ರ ಓದಲು ಶಾಂತಿ ಬೇಕೆಂದು ಹೆಳಿದ್ದ ಅಧಿಕಾರಿ ಈಗ ಶಾಂತ ಲೋಕಕ್ಕೆ ಪಯಣಿಸಿ ಬಿಟ್ಟಿದ್ದರು ಆದರೂ ಬಂಕರ್ ಭಾರತದ ವಶಕ್ಕೆ ಕೊಟ್ಟು ಹೋಗಿದ್ದರು. ಅಧಿಕಾರಿಯ ಸಾವಿನ ಸುದ್ದಿ ತಿಳಿದು ಡೇರೆಯಲ್ಲಿ ಅಂದು ರಾತ್ರಿ ಒಲೆ ಹಚ್ಚಲಿಲ್ಲ,ತಮ್ಮ ಪ್ರೀತಿಯ ಮೇಜರ್ ಸಾವಿಗೆ ಸೈನಿಕರು ತೋರಿದ ಗೌರವ ಅದು. ಅಧಿಕಾರಿಯ ಶವ ಅನೇಕ ದಿನಗಳ ಕಾಲ ಗುಡ್ಡದ ಮೇಲೆಯೇ ಇತ್ತು. ಶವ ತರಲು ಹೋದರೆ ಪಾಕಿಗಳು ಮೇಲಿನಿಂದ ಗುಂಡಿನ ಸುರಿಮಳೆಗಯ್ಯುತ್ತಿದ್ದರು. ಮುಂದೆ ಗುಡ್ಡವನ್ನು ವಶಪಡಿಸಿಕೊಂಡ ನಂತರವೇ ರಾಜೇಶ್ ಅಧಿಕಾರಿಯವರ ಶವ ಭಾರತದ ಕೈಸೆರಿದ್ದು.

ತಾನು ಯುದ್ಧಕ್ಕೆ ಹೋಗುವ ಮೊದಲೇ ರಾಜೇಶ್ ತನ್ನ ಹೆಂಡತಿಗೆ ಪತ್ರ ಬರೆದಿದ್ದರು,ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ‘ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಅಂತ ತನ್ನ ಹೆಂಡತಿಗೆ ಪತ್ರವನ್ನ ಬರೆದಿದ್ದರು.ಅದಕ್ಕೆ ಮೇಜರ್ ರಾಜೇಶರ ಹೆಂಡತಿ ಮರುಉತ್ತರ ಬರೆದು ಪತ್ರ ಕಳಿಸಿದ್ದರು. ನೀವು ವೀರಮರಣ ಹೊಂದಿದ ಜಾಗವನ್ನಷ್ಟೇ
ಅಲ್ಲ,ನಿಮ್ಮಂತೆಯೆ ನಿಮ್ಮ ಮಗನನ್ನು ಸಹ ಸೈನಿಕನನ್ನಾಗಿ ಮಾಡುತ್ತೇನೆ ಅಂತ ಬರೆದಿದದ್ದರು.

ಅದರೆ ಹೆಂಡತಿಯ ಆ ಪತ್ರ ಮಾತ್ರ ಅಧಿಕಾರಿ ಮೇಜರ್ ರಾಜೇಶ್ ಓದೋಕೆ ಆಗಲೇ ಇಲ್ಲ. ಮೇಜರ್ ರಾಜೇಶ್ ಸಿಂಗ್ ಅಧಿಕಾರಿ ಭಾರತ ಮಾತೆಯ ಮಡಿಲಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಾಗ ಅವರ ವಯಸ್ಸು ಕೇವಲ 26 ಆಗಿತ್ತು.

#ಜೈ_ಜವಾನ್

-postcard team

Tags

Related Articles

Close