ಇತಿಹಾಸ

ಉತ್ತರಭಾರತವನ್ನು ವಶಪಡಿಸಿಕೊಂಡ ನಂತರ ಅಲೆಕ್ಸಾಂಡರ್ ಹಿಂತಿರುಗಲು ನಿರ್ಧರಿಸಿದ್ದಾದರೂ ಯಾಕೆ??

ಅಲೆಕ್ಸಾಂಡರ್ ದಿ ಗ್ರೇಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!! ಸಾವಿರಾರು ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಅಖಂಡ ಭಾರತಕ್ಕೆ ದಂಡಯಾತ್ರೆಗೆಂದು ಬಂದಾಗ ಆತನ ಉದ್ದೇಶ ಭಾರತವನ್ನು ಕೈವಶ ಮಾಡಿಕೊಳ್ಳುವುದೇ ಆಗಿತ್ತು. ಇಲ್ಲಿನ ಸಂಪತ್ತನ್ನು ಲೂಟಿ ಮಾಡಿ ತನ್ನ ದೇಶವಾದ ಗ್ರೀಕ್ ಗೆ ತೆಗೆದುಕೊಂಡು ಹೋಗುವುದೇ ಆಗಿತ್ತು!!! ಆದರೆ ಉತ್ತರ ಭಾರತವನ್ನು ವಶಪಡಿಸಿಕೊಂಡ ನಂತರ ಅಲೆಕ್ಸಾಂಡರ್ ಭಾರತದಿಂದ ಹಿಂತಿರುಗಲು ಯಾಕೆ ನಿರ್ಧರಿಸಿದನು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ!! ಅಷ್ಟೇ ಅಲ್ಲದೇ ಭಾರತವನ್ನು ಯಾಕೆ ಆಕ್ರಮಣ ಮಾಡಿದ ಎನ್ನುವ ಕಾರಣಗಳನ್ನು ಗಮನಿಸುವುದು ಅತೀ ಮುಖ್ಯ. ಹಾಗಾಗಿ ಭಾರತಕ್ಕೆ ಅಲೆಕ್ಸಾಂಡರ್ ದಂಡೆತ್ತಿ ಬರಲು ಎರಡು ಮುಖ್ಯ ಕಾರಣಗಳಿದ್ದವು, ಅವು:

1. ಭಾರತೀಯ ಪ್ರಾಂತ್ಯಗಳಲ್ಲಿರುವ ಹಳೆಯ ಪರ್ಷಿಯನ್ ಸಾಮ್ರಾಜ್ಯವನ್ನು ಮರುಪಡೆದುಕೊಳ್ಳುವುದು: ಅಲೆಕ್ಸಾಂಡರ್ ದಿ ಗ್ರೇಟ್ ಪರ್ಷಿಯನ್ ಸಾಮ್ರಾಜ್ಯದ ಶ್ರೇಷ್ಠ ಉತ್ತರಾಧಿಕಾರಿಯಾಗಿದ್ದಲ್ಲದೇ ಸೇಡುತೀರಿಸಿಕೊಳ್ಳುವುದರಲ್ಲಿ ನಿಸ್ಸೀಮನಾಗಿದ್ದ!! ಅಂತೆಯೇ, ಹಳೆಯ ಪರ್ಷಿಯನ್ ಸಾಮ್ರಾಜ್ಯವನ್ನು ಜಯಿಸಬೇಕು ಎಂದು ತಿಳಿದುಕೊಂಡಿದ್ದ ಈತ ಉತ್ತರ ಭಾರತವು ಪರ್ಷಿಯನ್ ಸಾಮ್ರಾಜ್ಯದ ಪ್ರಾಂತವಾಗಿದ್ದರಿಂದ ಅಲೆಕ್ಸಾಂಡರ್ ಆ ಪ್ರದೇಶ ತನ್ನದೆಂದು ಪರಿಗಣಿಸಿದ್ದ. ಹಾಗಾಘಿ ಈ ಒಂದು ಪ್ರದೇಶವನ್ನು ವಶಪಡಿಸಿಕೊಳ್ಳುವುದೇ ಈತನ ಮುಖ್ಯ ಉದ್ದೇಶವಾಗಿತ್ತು.

2. ಈಡೀ ಸಾಮ್ರಾಜ್ಯವನ್ನೇ ತನ್ನದಾಗಿಸುವ ಮಹಾದಾಸೆ: ಗ್ರೀಕ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜನಾದ ಅಲೆಕ್ಸಾಂಡರ್ ದಿ ಗ್ರೇಟ್, ಅರಿಸ್ಟಾಟಲ್ ತತ್ವಜ್ಞಾನಿಯ ಪರಮ ಶಿಷ್ಯನಾಗಿದ್ದ. ಹಾಗಾಗಿ ಅಲೆಕ್ಸಾಂಡರ್, ಇತಿಹಾಸದ ಒಂದು ಬಹುದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ್ದಾನಲ್ಲದೇ ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು. ಅಲೆಕ್ಸಾಂಡರ್‍ನ ಗುರು ಅರಿಸ್ಟಾಟಲ್ ತಿಳಿಸಿದಂತೆ ಮಹಾಸಾಗರವು ಅತ್ಯಂತ ಸಮೀಪದಲ್ಲಿದೆ ಎಂದು ನಂಬಿದ್ದನು. ಆದರೆ, ಈತನ ಬಳಿ ಯಾವುದೇ ರೀತಿಯ ಆಧುನಿಕ ನಕ್ಷೆಗಳನ್ನು ಹೊಂದಿರಲಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕಾಗಿದ್ದು ಬಹು ಮುಖ್ಯ!! ಆದರೆ ಅಲೆಕ್ಸಾಂಡರ್‍ಗೆ ಮಹಾ ಸಾಗರವು ಅತೀ ವಿಸ್ತಾರವಾಗಿದೆ ಮಾತ್ರವಲ್ಲದೇ, ಅವನ ಹಾಗೂ ಸಮುದ್ರದ ನಡುವೆ ಒಂದು ಇಡೀ ಉಪಖಂಡವಿದೆ ಎನ್ನುವುದು ಕೂಡ ಆತನಿಗೆ ತಿಳಿರಲಿಲ್ಲ!! ಅಷ್ಟೇ ಅಲ್ಲದೇ ಈತ ಮಹಾಸಾಗರದಲ್ಲಿ ಹೋಗುವ ಪ್ರಲೋಭೆಯನ್ನು ಯಾವತ್ತು ಕೂಡ ಅಲೆಕ್ಸಾಂಡರ್ ವಿರೋದಿಸಿದ್ದೇ ಇಲ್ಲ. ಹಾಗಾಗಿ ವಿಶ್ವವವನ್ನು ಜಯಿಸಲು ಸಾಧ್ಯವಾಯಿತು ಎಂದು ಹೇಳುತ್ತಾರೆ!!

ಈ ನಕ್ಷೆಯು ಅಲೆಕ್ಸಾಂಡರ್ ದಿ ಗ್ರೇಟ್ ಮತ್ತು ಆ ಯುಗದ ಗ್ರೀಕರು ಜಗತ್ತನ್ನು ಹೇಗೆ ವೀಕ್ಷಿಸಿದರು ಎಂಬುವುದನ್ನು ಇಲ್ಲಿ ತೋರಿಸಲಾಗಿದೆ, ಹಾಗಾಗಿ ನಾವಿದನ್ನು ಇಲ್ಲಿ ನೋಡಬಹುದಾಗಿದೆ!! ಅಲೆಕ್ಸಾಂಡರ್ ತನ್ನ ಭಾರತಕ್ಕೆ ದಂಡೆತ್ತಿ ಬಂದಾಗ ಭಾರತ ಇಷ್ಟೊಂದು ವಿಸ್ತಾರವಾಗಿದೆ ಎಂದು ನಂಬಿರಲಿಲ್ಲ. ಅಷ್ಟೇ ಅಲ್ಲದೇ, ಸಮುದ್ರದ ಸಮೀಪದಲ್ಲಿರುವ ಭಾರತವು ಅತಿ ದೊಡ್ಡ ಭೂಮಿಯಾಗಿದೆ ಎಂದು ಆತ ನಂಬಿರಲಿಲ್ಲ!! ಆದರೆ ಇವೆಲ್ಲವೂ ಕೂಡ ಆತನ ಯೋಜನೆಯ ಪ್ರಕಾರ ಇರಲಿಲ್ಲ!! ಆದರೆ:

ಅಲೆಕ್ಸಾಂಡರ್ ಮೊದಲ ಬಾರಿಗೆ ಭಾರತಕ್ಕೆ ದಂಡೆತ್ತಿ ಬಂದಾಗ ಭಾರತೀಯ ಭೌಗೋಳಿಕತೆಯ ಬಗ್ಗೆ ಯಾವುದೇ ರೀತಿಯ ಮಾಹಿತಿಯು ಈತನಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ, ತಕ್ಷಶಿಲೆ ತಲುಪಿದ ಸಮಯದಲ್ಲಿ ಭಾರತ ಇಷ್ಟೊಂದು ವಿಶಾಲವಾಗಿದೆ ಎಂದು ಯೋಚಿಸಿರಲಿಲ್ಲ!! ಆದರೆ ಭಾರತದ ಬಗ್ಗೆ ಸ್ಥಳೀಯರು ಹಾಗೂ ವಿದೇಶಿಯರು ಈತನಿಗೆ ತಿಳಿಸಬೇಕಾಯಿತು ಎಂದು ಹೇಳಲಾಗಿದೆ!!

ಅಲೆಕ್ಸಾಂಡರ್, ಸ್ಥಳೀಯ ಭಾರತೀಯ ಬುಡಕಟ್ಟು ಜನಾಂಗ ಮತ್ತು ಭಾರತೀಯ ಪೊರುಸ್ ರಾಜನೊಂದಿಗೆ ಬಲವಾದ ಪ್ರತಿರೋಧವನ್ನು ಎದುರಿಸಿದನು. ಹಾಗಾಗಿ ಹೈಡಸ್ಪೆಸ್ ಯುದ್ದದಲ್ಲಿ(ಮೇ 326 ಬಿಸಿಇ)ಪೊರುಸ್‍ನ್ನು ಎದುರಿಸಿ ಸೋಲಿಸಿದನು. ಇದು ಅಲೆಕ್ಸಾಂಡರ್ ನ ವೃತ್ತಿ ಜೀವನದ ಅತ್ಯಂತ ಕಠಿಣವಾದ ಕದನಗಳಲ್ಲಿ ಒಂದಾಗಿತ್ತು. ಆ ಕಾರಣಕ್ಕಾಗಿ ಪೊರುಸ್‍ನನ್ನು ಸೋಲಿಸಲು ಅತ್ಯಂತ ಕಠಿಣವಾದ ತಂತ್ರವನ್ನು ಉಪಯೋಗಿಸಿ ಈತನನ್ನು ಸೋಲಿಸಿದನು!! ಭಾರತೀಯರ ಆಯುಧ ಶಾಲೆಗಳಲ್ಲಿ ಇದ್ದ ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರ ಎಂದರೆ ಯುದ್ದದ ಆನೆಗಳು. ಇದನ್ನು ಕಂಡ ಅಲೆಕ್ಸಾಂಡರ್‍ನ ಕುದುರೆಗಳು ನಡುಗಿದ್ದು, ತದನಂತರ ಅಲೆಕ್ಸಾಂಡರ್ ಅದ್ಭುತವಾದ ತಂತ್ರಗಳನ್ನು ಬಳಸಿ ಪೊರುಸ್‍ನನ್ನು ಸೋಲಿಸಬೇಕಾಯಿತು!!

ಅಲೆಕ್ಸಾಂಡರ್‍ನ ಸೈನ್ಯವು ಭಾರತದ ಉಷ್ಣವಲಯದ ಪರಿಸರಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಹಾಗಾಗಿ ಮಳೆಗಾಲದಿಂದ, ಹಾವುಗಳಿಂದ ಮತ್ತು ಇತರ ಪ್ರಾಣಿಗಳಿಂದಾಗಿ ಹಲವಾರು ರೋಗಗಳಿಗೆ ತುತ್ತಾಗಿ ಈತ ಸೈನ್ಯವು ಹಾನಿಗೊಳಗಾದವು. ಆದರೆ, ಭಾರತದಲ್ಲಿ ಮಸೆಡೊನಿಯ ಸೇನೆಯು ಸುಮಾರು 12ವರ್ಷಗಳ ಕಾಲ ಕಾರ್ಯಚರಣೆಯಲ್ಲಿದ್ದವು ಎಂಬುವುದನ್ನು ನಾವು ನೆನಪಿಟ್ಟುಕೊಳ್ಳಬೇಕು!!! ಆದರೆ ಇವರಲ್ಲಿ ಕೆಲ ಸೈನಿಕರು ಮಸೆಡೊನಿಯಗೆ ಹಿಂತಿರುಗಲು ಬಯಸಿದ್ದಲ್ಲದ್ದಲ್ಲದೇ ಬೇರೆ ಪ್ರದೇಶದಲ್ಲಿ ಹೋರಾಡಿ ವಿಜಯ ಪತಾಕೆ ಹಾರಿಸಬೇಕೆಂದು ಬಯಸಿದ್ದರು!! ಆ ಸಂದರ್ಭದಲ್ಲಿ ಅಲೆಗ್ಸಾಂಡರ್, ಸಂಪೂರ್ಣ ಪರ್ಷಿಯನ್ ಸಾಮ್ರಾಜ್ಯನ್ನು ವಶಪಡಿಸಿಕೊಂಡಿದ್ದು, ಐಷಾರಾಮಿ ಜೀವನವನ್ನು ನಡೆಸಲು ಸಾಕಷ್ಟು ಸಂಪತ್ತನ್ನು ಸಂಪಾದಿಸಿದ್ದರು. ಹಾಗಾಗಿ ಇಂತಹ ಸ್ಥಿತಿಯಲ್ಲಿ ಯಾವುದೇ ಹೋರಾಟ ಮಾಡಬೇಕೆಂಬ ಕಾರಣವೂ ಇವರಿಗಿರಲಿಲ್ಲ!!

ಮಸೆಡೊನಿಯ ಸೈನ್ಯವು ಹೈಫಿಸ್ ನದಿ ತೀರಕ್ಕೆ ತಲುಪಿದಾಗ, ಅಲೆಕ್ಸಾಂಡರ್‍ಗೆ ಗಂಗಾ ನದಿಯ ಆಚೆಗೆ 2,00,000 ಪದಾತಿದಳ, 80,000 ಅಶ್ವಸೈನ್ಯಗಳು, 8,000ಯುದ್ದ ರಥಗಳು ಮತ್ತು 6,000 ಯುದ್ದ ಆನೆಗಳನ್ನು ಹೊಂದಿರುವ ಪ್ರಬಲವಾದ ನಂದಾ ಸಾಮ್ರಾಜ್ಯವಿದೆ ಎಂದು ತಿಳಿದಿತ್ತು!! ಆದರೆ ಆ ಸಂದರ್ಭದಲ್ಲಿ ಅಲೆಕ್ಸಾಂಡರ್‍ನ ಬಳಿ ಕೇವಲ 40,000 ಪದಾತಿದಳ ಮತ್ತು 7,000 ಅಶ್ವಸೈನ್ಯವನ್ನು ಹೊಂದಿದ್ದನು. ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ಅವನ ಸೈನಿಕರು ದಣಿದಿದ್ದರು ಮಾತ್ರವಲ್ಲದೇ, ಎಲ್ಲರೂ ಬಂಡಾಯದ ಅಂಚಿನಲ್ಲಿದ್ದರು. ಹಾಗಾಗಿ ಆ ವೇಳೆ ಮಹಾಸಾಗರವು ಬಹಳ ದೂರದಲ್ಲಿದೆ ಎನ್ನುವುದು ಅಲೆಕ್ಸಾಂಡರ್‍ಗೆ ತಿಳಿದಿತ್ತು!! ಆದರೆ ಈತ ಆ ಸಂದರ್ಭದಲ್ಲಿ ಭಾರತದಲ್ಲಿನ ಹಳೆಯ ಪರ್ಷಿಯನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದ. ಹಾಗಾಗಿ ಹೆಚ್ಚಿನ ಯುದ್ದವನ್ನು ಮಾಡುವ ಯಾವುದೇ ನಿರೀಕ್ಷೆಯಾಗಲಿ ಅಥವಾ ಕಾರಣವಾಗಲಿ ಈತನಿಗೆ ಇರಲಿಲ್ಲ.

ಆದರೆ, ಪುರಾತನ ಇತಿಹಾಸಕಾರರ ಪ್ರಕಾರ, ಅಲೆಕ್ಸಾಂಡರ್ ಸೈನ್ಯವು ಹೈಫಸಿಸ್ ನದಿಯ ಬಳಿ ದಂಗೆಯೆದ್ದಿದ್ದು, ಈ ದಂಗೆಯಿಂದ ಅಲೆಕ್ಸಾಂಡರ್ ನನ್ನು ಬಲವಂತವಾಗಿ ಹಿಂತಿರುಗಿಸಿ ಹೋಗುವಂತೆ ಮಾಡಿತು ಎಂದು ಹೇಳಲಾಗಿದೆ!! ಅಷ್ಟೇ ಅಲ್ಲದೇ, ಕೆಲವು ಆಧುನಿಕ ಇತಿಹಾಸಕಾರರು ಹೇಳುವ ಪ್ರಕಾರ, ಅಲೆಕ್ಸಾಂಡರ್ ತನ್ನ ಪ್ರತಿಷ್ಠೆಗೆ ಹಾನಿಯಾಗದಂತೆ ಭಾರತದಿಂದ ಹಿಂತಿರುಗುವ ಸಲುವಾಗಿ ಈ ಯುದ್ದ ಸಂಭವಿಸಿತು ಎಂದು ನಂಬುತ್ತಾರೆ. ಆದರೆ ಅಲೆಕ್ಸಾಂಡರ್ ಮೂರ್ಖನಲ್ಲ: ಯಾಕೆಂದರೆ ಭಾರತದಲ್ಲಿ ತನ್ನ ದಂಡಯಾತ್ರೆವನ್ನು ಮುಂದುವರೆಸಿದರೆ ಅದು ಹುಚ್ಚುತನ ಎಂದು ತಿಳಿದಿದ್ದು, ಶೀಘ್ರದಲ್ಲಿಯೇ ಅಥವಾ ಕೆಲವು ದಿನಗಳ ನಂತರ ಇಲ್ಲಿನ ಸೈನ್ಯಗಳು ತನ್ನ ಮೇಲೆ ದಂಗೆ ಏಳಹುದು ಎಂದುಕೊಂಡಿದ್ದ. ಆದರೆ ಹೈಫಿಸ್ ನದಿಯಲ್ಲಿ ನಿಜವಾಗಿಯೂ ದಂಗೆ ನಡೆಯಿತೇ ಅಥವಾ ಪ್ರಚಾರ ಗಿಟ್ಟಿಸಿಕೊಳ್ಳುವ ಸಾಹಸದಲ್ಲಿ ಅಲೆಕ್ಸಾಂಡರ್ ಭಾರತದಿಂದ ಹಿಂತಿರುಗಿದ ಎಂದು ಹೇಳಲಾಗಿದೆಯೇ ಎನ್ನುವ ಪ್ರಶ್ನೆಗಳು ಮಾತ್ರ ಕಾಡುತ್ತಿವೆ!!

ಮೂಲ: https://www.quora.com/Why-did-Alexander-the-Great-decide-to-turn-back-after-he-conquered-Northern-India/answer/Christos-Antoniadis-1?share=434232b9&srid=LgDC

-ಅಲೋಖಾ

Tags

Related Articles

Close